ಕಾಂಟ್ರವರ್ಸಿಗಳಿಂದ ಚರ್ಚೆಯಾಗುವ ನಿತ್ಯಾನಂದ ಈ ಬಾರಿ ಇನ್ನಿಲ್ಲ ಎನ್ನಲಾಗುತ್ತಿದೆ. ಹಾಗಾದರೆ ಸತ್ಯ ಏನು? 

ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ನಿತ್ಯಾನಂದ ಸ್ವಾಮಿ ಈಗ ಇನ್ನಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ನಿತ್ಯಾನಂದ ಸಹೋದರಿ ಮಗ ಸುಂದರೇಶ್ವರನ್‌ ಅವರು ಹೇಳಿಕೆ ನೀಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ನಿತ್ಯಾನಂದ ಸತ್ತಿದ್ದು ನಿಜಾನಾ?
ಸುಂದರೇಶ್ವರನ್‌ ಅವರು ನಿತ್ಯಾನಂದ ಸಿಕ್ಕಾಪಟ್ಟೆ ಹೋರಾಟ ಮಾಡಿದ್ದಾರೆ, ಹಿಂದು ಧರ್ಮಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ, 20 ವರ್ಷಗಳಿಂದ ಅವರ ಮೇಲೆ ಎಷ್ಟೇ ಆರೋಪ ಮಾಡಿದರೂ ಅವರು ಅದಿಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಅಮೆಜಾನ್ ಕಾಡಲ್ಲಿ ನಿತ್ಯಾನಂದ ಭೂ ಕಬಳಿಕೆ: ದೆಹಲಿಗಿಂತ 2.6, ಮುಂಬೈಗಿಂತ 6.5, ಬೆಂಗಳೂರಿಗಿಂತ 5.3 ಪಟ್ಟು ದೊಡ್ಡದು!

ಬೇರೆ ಯಾರೂ ಏನೂ ಹೇಳಿಲ್ಲ! 
ಈ ವಿಡಿಯೋ ರಿಲೀಸ್‌ ಆದ ಬಳಿಕ, ಇವರ ಸಾವಿನ ಬಗ್ಗೆ ಊಹಾಪೋಹಗಳು ಹೆಚ್ಚುತ್ತಲಿವೆ. ನಿತ್ಯಾನಂದ ಅವರ ಸಾವಿನ ಬಗ್ಗೆ ಅಥವಾ ಅವರ ಸಾವಿಗೆ ಕಾರಣದ ಬಗ್ಗೆ ಸುಂದರೇಶ್ವನ್‌ ಬಿಟ್ಟು ಇನ್ಯಾರೂ ಯಾವುದೇ ಅಧಿಕೃತ ಹೇಳಿಕೆ ಹಂಚಿಕೊಂಡಿಲ್ಲ. ಒಂದಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿತ್ಯಾನಂದ ನಿಜಕ್ಕೂ ಈಗ ತೀರಿಕೊಂಡಿರಬಹುದು ಎಂಬ ಅನುಮಾನ ಶುರುವಾಗಿದೆ. 

ಆರೋಪಗಳು! 
ನೇರ ನುಡಿಗಳ ಜೊತೆಯಲ್ಲಿ 2010 ರಲ್ಲಿ, ನಟಿಯೊಬ್ಬರೊಂದಿಗಿನ ಲೈಂಗಿಕ ಹಗರಣದ ನಂತರದಲ್ಲಿ ಮತ್ತೆ ಅವರ ಮೇಲೆ ಅತ್ಯಾಚಾರದ ಆರೋಪವೂ ಬಂದಿತ್ತು. 

ಕೆಲವು ದಿನಗಳ ಹಿಂದೆ ನಿತ್ಯಾನಂದ ಅವರಿಗೆ ಅನಾರೋಗ್ಯ ಉಂಟಾಗಿತ್ತು, ಕೋಮಾದಲ್ಲಿದ್ದಾರೆ ಎನ್ನುವ ಮಾತು ಬಂದಿತ್ತು. ಆ ನಂತರದಲ್ಲಿ ಅವರು ಪ್ರವಚನಗಳನ್ನು ಜಾಸ್ತಿ ಮಾಡಿದರು. ಈಗ ಮತ್ತೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈಗಾಗಲೇ ಒಂದಷ್ಟು ಪ್ರಕರಣಗಳು ಇದ್ದು, ಅವೆಲ್ಲವುಗಳಿಂದ ಬಚಾವ್‌ ಆಗಲು ಈ ರೀತಿ ಮಾತಾಡ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ. 

ನಂದ ಲವ್ಸ್‌ ನಂದಿತಾ ಅಲ್ಲ.. ಇದು ನಿತ್ಯಾನಂದ ಕ್ರಿಯೇಟ್ಸ್‌ ನಿತ್ಯಾನಂದಿತಾ!

ಕೈಲಾಸವಾಸಿ ನಿತ್ಯನಂದ! 
ನಿತ್ಯಾನಂದ ಅವರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಜನಿಸಿದ್ದು, ಆಮೇಲೆ ಕರ್ನಾಟಕದ ಬೀದರ್‌ಗೆ ಬಂದರು. ಇವರ ವಿರುದ್ಧ ಒಂದಷ್ಟು ಆರೋಪಗಳು ಬಂದಮೇಲೆ 2019ರಿಂದ ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾರೆ. ಆ ನಂತರ ಅವರು “ನಾನೊಂದು ದೇಶ ರಚಿಸಿದ್ದೇನೆ, ಅದಿಕ್ಕೆ ಯುನೈಟೆಡ್‌ ಸ್ಟೇಟ್‌ ಆಫ್‌ ಕೈಲಾಶ್ ಎಂದು ಹೆಸರಿಟ್ಟಿದ್ದೇನೆ”‌ ಎಂದಿದ್ದರು. ಇದು ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಕೆಲವರು ದ್ವೀಪ ಎಂದರೆ ಇನ್ನೂ ಕೆಲವರು ಇದೊಂದು ಕಲ್ಪನೆ ಎನ್ನುತ್ತಾರೆ. ಹಿಂದು ರಾಷ್ಟ್ರವನ್ನು ಕಟ್ಟಿದ್ದೇನೆ ಎಂದು ನಿತ್ಯಾನಂದ ಬೀಗುತ್ತಾರೆ.


ನಿತ್ಯಾನಂದಗೆ ಈಗ 47 ವರ್ಷ ವಯಸ್ಸು. ಬೇರೆ ಬೇರೆ ದೇಶಗಳಲ್ಲಿ ನಿತ್ಯಾನಂದರ ಆಶ್ರಮ, ದೇವಸ್ಥಾನ ಇದೆ ಎನ್ನಲಾಗುತ್ತದೆ. ಇನ್ನು ಬೆಂಗಳೂರಿನ ಬಿಡದಿಯಲ್ಲಿ ನಿತ್ಯಾನಂದರ ಧ್ಯಾನಪೀಠ ಇದೆ. ಇನ್ನು ತಮ್ಮನ್ನು ತಾವೇ ‘ದೇವ ಮಾನವ’ ಎಂದು ಕರೆಸಿಕೊಂಡಿರೋ ನಿತ್ಯಾನಂದ ನಿಜಕ್ಕೂ ತೀರಿಕೊಂಡಿದ್ದಾರಾ? ಅಥವಾ ಏಪ್ರಿಲ್‌ ಫೂಲ್‌ ಮಾಡುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ. 

பகவானின் பெருந்தியாகம்