ಜೈಪುರ ವಿಮಾನ ನಿಲ್ದಾಣದಲ್ಲಿ ಶಶಿ ತರೂರ್ ಬಂಧನ ವದಂತಿ

Was Shashi Tharoor Detained at airport for Travelling with Pistol
Highlights

ಪಿಸ್ತೂಲ್ ಅನ್ನು ಇಟ್ಟುಕೊಂಡ ಕಾರಣಕ್ಕೆ ಜೈಪುರ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಸುದ್ದಿಯಾಗಿತ್ತು. ಆದರೆ, ಶಶಿ ತರೂರ್ ಅವರನ್ನು ವಶಕ್ಕೆ ಪಡೆಯಲಾಗಿಲ್ಲ. ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಜೈಪುರ: ಪಿಸ್ತೂಲ್ ಅನ್ನು ಇಟ್ಟುಕೊಂಡ ಕಾರಣಕ್ಕೆ ಜೈಪುರ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಸುದ್ದಿಯಾಗಿತ್ತು. ಆದರೆ, ಶಶಿ ತರೂರ್ ಅವರನ್ನು ವಶಕ್ಕೆ ಪಡೆಯಲಾಗಿಲ್ಲ. ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಜೈಪುರ ವಿಮಾನ ನಿಲ್ದಾಣದಲ್ಲಿ ತಮ್ಮ ಸೋದರಿಯ ಬರುವಿಕೆಗಾಗಿ ಶಶಿ ತರೂರ್ ಕಾಯುತ್ತಿದ್ದರು. ಈ ವೇಳೆ ಯಾರೋ ಒಬ್ಬರು ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ ಎಂದು ಕೇಳಿದ್ದು, ಅದಕ್ಕೆ ಶಶಿ ತರೂರ್ ‘ಮೈ ಸಿಸ್ಟರ್’ ಎಂದು ಹೇಳಿದ್ದರು.

ಆದರೆ, ಅದನ್ನು ಪಿಸ್ತೂಲ್ ಎಂದು ಅರ್ಥ ಮಾಡಿಕೊಂಡ ಆತ ಭದ್ರತಾ ಪಡೆಗಳಿಗೆ ಮಾಹಿತಿ ನಿಡಿದ್ದ. ಬಳಿಕ ಈ ವಿಷಯವಾಗಿ ಶಶಿ ತರೂರ್ ಸ್ಪಷ್ಟನೆ ನೀಡಿದ್ದು, ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.

loader