Asianet Suvarna News Asianet Suvarna News

ಐಎಎಸ್ ಅಧಿಕಾರಿ ತಿವಾರಿಯದ್ದು ಹತ್ಯೆ? ರಾಜ್ಯದ ಅಧಿಕಾರಿ ನಿಗೂಢ ಸಾವು ಕೇಸಿಗೆ ತಿರುವು

ನಾಲ್ಕು ತಿಂಗಳ ಹಿಂದೆ ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅನುರಾಗ್ ತಿವಾರಿ ಕೊನೆಯು ಸಿರೆಳೆಯುವುದಕ್ಕೂ ಮುನ್ನ ಅವರ ದೇಹದ ಮೇಲೆ 6 ಗಾಯಗಳಾಗಿದ್ದವು ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಹೀಗಾಗಿ ತಮ್ಮ ಪುತ್ರ ಸಹಜವಾಗಿ ಸಾವನ್ನಪ್ಪಿಲ್ಲ, ಆತನನ್ನು ಹತ್ಯೆ ಮಾಡಲಾಗಿದೆ ಎಂದು ತಿವಾರಿ ಕುಟುಂಬದವರು ಈವರೆಗೂ ಹೇಳಿಕೊಂಡು ಬಂದಿದ್ದು ನಿಜವಾಗಿದೆ.

Was IAS officer Anurag Tiwari Murdered

ಲಖನೌ: ನಾಲ್ಕು ತಿಂಗಳ ಹಿಂದೆ ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಅನುರಾಗ್ ತಿವಾರಿ ಕೊನೆಯು ಸಿರೆಳೆಯುವುದಕ್ಕೂ ಮುನ್ನ ಅವರ ದೇಹದ ಮೇಲೆ 6 ಗಾಯಗಳಾಗಿದ್ದವು ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಹೀಗಾಗಿ ತಮ್ಮ ಪುತ್ರ ಸಹಜವಾಗಿ ಸಾವನ್ನಪ್ಪಿಲ್ಲ, ಆತನನ್ನು ಹತ್ಯೆ ಮಾಡಲಾಗಿದೆ ಎಂದು ತಿವಾರಿ ಕುಟುಂಬದವರು ಈವರೆಗೂ ಹೇಳಿಕೊಂಡು ಬಂದಿದ್ದು ನಿಜವಾಗಿದೆ.

ಖಿನ್ನತೆಯಿಂದ ಬಳಲುತ್ತಿದ್ದ ತಿವಾರಿ ಅವರು ಔಷಧ ಸೇವಿಸುತ್ತಿದ್ದರು. ಆದಕಾರಣ ಮಿತಿಮೀರಿದ ಔಷಧ ಸೇವನೆಯಿಂದ ಅಥವಾ ಹೃದಯಾಘಾತದಿಂದ ಅವರು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆ ವೇಳೆ ಅಧಿಕಾರಿಗಳು ಶಂಕಿಸಿದ್ದರು.

ಆದರೆ ಈಗ ಬಹಿರಂಗವಾಗಿರುವ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ, ಸಾವನ್ನಪ್ಪುವ ಮುನ್ನ ತಿವಾರಿ ಅವರ ದೇಹದ ಮೇಲೆ 6 ಗಾಯಗಳಾಗಿದ್ದವು ಎಂದು ತಿಳಿದು ಬಂದಿದೆ. ಇದರಿಂದಾಗಿ ತಿವಾರಿ ಅವರದ್ದು ಕೊಲೆ ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳನ್ನು

ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಮರಣೋತ್ತರ ಪರೀಕ್ಷೆ ವೇಳೆ ಅನುರಾಗ್ ತಿವಾರಿ ಅವರ ಎಡಕೆನ್ನೆ, ಕೆಳ ತುಟಿ, ಎಡಕೈನ ಮಣಿಕಟ್ಟು, ಬಲಗಾಲಿನ ಮಂಡಿ, ಕುತ್ತಿಗೆಯ ಹಿಂಭಾಗದಲ್ಲಿ ಗಾಯಗಳು ಕಂಡು ಬಂದಿವೆ. ಈ ಗಾಯ ಸಂಭವಿಸಿದ ವೇಳೆ ಅವರು ಆಘಾತಕ್ಕೆ ಒಳಗಾಗಿದ್ದು ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿದ್ದ ತಿವಾರಿ ಅವರು ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿಗೆ ಹಾಜರಾಗಿದ್ದರು. ಈ ನಡುವೆ, ತಮ್ಮ ತವರು ರಾಜ್ಯ ಉತ್ತರಪ್ರದೇಶದ ಲಖನೌಗೆ ತೆರಳಿದ್ದ ಅವರು, ಅಲ್ಲಿನ ವಿಧಾನಸಭೆಗೆ ಅನತಿ ದೂರದಲ್ಲೇ ಇರುವ ಹಜರತ್ ಗಂಜ್ ಪ್ರದೇಶದಲ್ಲಿನ ಮೀರಾಬಾಯಿ ಅತಿಥಿ ಗೃಹದಲ್ಲಿ ತಂಗಿದ್ದರು. ಮೇ 17ರಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಲಖನೌ ಪೊಲೀಸರು ನಡೆಸಿದ್ದರು. ನಂತರ ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಕರ್ನಾಟಕದಲ್ಲಿ ಅಧಿಕಾರಿಯಾಗಿದ್ದ ಅವರು ಆಹಾರ ಇಲಾಖೆಯ ಹಗರಣಗಳನ್ನು ಬಯಲಿಗೆ ಎಳೆಯುವವರಿದ್ದರು. ಹೀಗಾಗಿ ಅವರು ಹತ್ಯೆಯಾಗಿರಬಹುದು ಎಂಬ ವಾದಗಳು ಆರಂಭದಲ್ಲಿ ಕುಟುಂಬವರ್ಗದಿಂದ ಕೇಳಿಬಂದಿದ್ದವು.

 

 

Follow Us:
Download App:
  • android
  • ios