ಹಿಂದೂ ಮನೆಗಳ ಮೇಲೆ ಪಾಕಿಸ್ತಾನಿ ಪೊಲೀಸರಿಂದ ದಾಳಿ?

Was a Hindu Family Attacked by Pakistani Police
Highlights

ಬೆಂಗಳೂರು (ಜ.10): ಹಿಂದೂ ಕುಟುಂಬವೊಂದು ಪಾಕಿಸ್ತಾನಿ ಪೊಲೀಸರಿಂದ ಕಿರುಕುಳಕ್ಕೆ ಒಳಗಾಗಿದೆ ಎಂಬಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು (ಜ.10): ಹಿಂದೂ ಕುಟುಂಬವೊಂದು ಪಾಕಿಸ್ತಾನಿ ಪೊಲೀಸರಿಂದ ಕಿರುಕುಳಕ್ಕೆ ಒಳಗಾಗಿದೆ ಎಂಬಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ವಿಡಿಯೋದ ಕೆಳಗೆ ಮುಸ್ಲಿಮರು ಹಿಂದು ಮನೆಗಳ ಮೇಲೆ ದಾಳಿ ಮಾಡಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಅಡಿಬರಹವನ್ನೂ ಬರೆಯಲಾಗಿದೆ. ಆ ವಿಡಿಯೋದಲ್ಲಿ ಪೊಲೀಸರು ಮತ್ತು ಕೆಲ ವ್ಯಕ್ತಿಗಳು ಒಂದು ಮನೆಯ ಮೇಲೆ ದಾಳಿ ನಡೆಸಿ ಅಲ್ಲಿನ ನಿವಾಸಿಗಳ ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಅದನ್ನು ಚಿತ್ರೀಕರಣ ಕೂಡ ಮಾಡಲಾಗುತ್ತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ವಿಡಿಯೋದ ಅಸಲಿ ಕತೆಯೇ ಬೇರೆ. ಈ ವಿಡಿಯೋ ಈಗಿನದ್ದಲ್ಲ. ಬದಲಿಗೆ 2013 ರಲ್ಲಿ ಪಾಕಿಸ್ತಾನದ ಫೈಸಲಾಬಾದ್'ನಲ್ಲಿ ಚಿತ್ರೀಕರಿಸಲಾದ ವಿಡಿಯೋ. ಅಲ್ಲದೆ ಈ ಘಟನೆಗೆ ಕೋಮು ಘರ್ಷಣೆಗೆ ಸಂಬಂಧಿಸಿದ್ದಲ್ಲ. ದಾಳಿಗೆ ಒಳಗಾಗಿರುವವರು ತಮ್ಮ ಧರ್ಮದ ಕಾರಣದಿಂದಾಗಿ ದಾಳಿಗೆ ಒಳಗಾಗಿಲ್ಲ ಎಂದು ಪಾಕಿಸ್ತಾನದಲ್ಲಿ ಪ್ರಕಟಗೊಂಡ ಲೇಖನವೊಂದು ಸ್ಪಷ್ಟಪಡಿಸಿದೆ. ಘಟನೆಯಲ್ಲಿ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ 5 ಜನ ಪೊಲೀಸರನ್ನು ಅಮಾನತು ಮಾಡಲಾಗಿತ್ತು ಎಂದೂ ಕೂಡ ವರದಿಯಾಗಿದೆ.

2013 ರಲ್ಲಿ ಫೈಸಲಾಬಾದ್‌ನಲ್ಲಿ ಲೋಡ್‌ಶೆಡ್ಡಿಂಗ್ ವಿರುದ್ಧ ನಡೆದ ಪ್ರತಿಭಟನೆ ನಡೆಸಲಾಗಿತ್ತು. ಆಗ ಪ್ರತಿಭಟನಾಕಾರರು ದಿನಕ್ಕೆ 14-16 ಗಂಟೆ ಲೋಡ್‌'ಶೆಡ್ಡಿಂಗ್ ಮಾಡುತ್ತಿರುವುದಾಗಿ ಆರೋಪಿಸಿ ಟೈರ್ ಸುಟ್ಟು, ಕಲ್ಲುಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು. ಆಗ ಪೊಲೀಸರು ಪ್ರತಿಭಟನಾಕಾರರ ಮನೆಗೇ ತೆರಳಿ ಒತ್ತಾಯಪೂರ್ವಕವಾಗಿ ಮನೆಯೊಳಗೆ ನುಗ್ಗಿ ಬಂಧಿಸಿದ್ದರು. ಈ ವೇಳೆ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ೫ ಜನ ಪೊಲೀಸರನ್ನು ಅಮಾನತು ಮಾಡಲಾಗಿತ್ತು.

 

loader