ಕಳೆದ ಸಪ್ಟಂಬರ್’ನಲ್ಲಿ ಚೀನಾದಲ್ಲಿ ನಡೆದ  ಜಿ-20 ಸದಸ್ಯ ದೇಶಗಳ ಶೃಂಗಮೇಳದ ಸಂದರ್ಭದಲ್ಲಿ, ಅಮೆರಿಕಾ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ಪುತಿನ್’ಗೆ ವೈಯುಕ್ತಿಕವಾಗಿ ಭೇಟಿಯಾಗಿ ಎಚ್ಚರಿಸಿರುವುದಾಗಿಯೂ, ಇಲ್ಲದಿದ್ದರೆ ಗಂಭೀರವಾದ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಹೇಳಿದ್ದೇನೆಂದು ಒಬಾಮಾ ಹೇಳಿದ್ದಾರೆ.

ವಾಷಿಂಗ್ಟನ್ (ಡಿ.17): ಕಳೆದ ಅಮೆರಿಕಾ ಚುನಾವಣೆಯಲ್ಲಿ ರಷ್ಯಾ ಹ್ಯಾಕಿಂಗ್ ಮಾಡುವ ಮೂಲಕ ಹಸ್ತಕ್ಷೇಪ ನಡೆಸಿದೆಯೆನ್ನಲಾದ ವಿವಾದವು ದಿನಗಳೆದಂತೆ ಕಾವೇರತೊಡಗಿದೆ.

ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಿ, ಅಥವಾ ಕಠಿಣ ಕ್ರಮ ಎದುರಿಸಿರಿ ಎಂದು ರಷ್ಯಾ ಅಧಯಕ್ಷ ವ್ಲಾದಿಮರ್ ಪುತಿನ್’ಗೆ ವೈಯುಕ್ತಿಕವಾಗಿ ಎಚ್ಚರಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಕಳೆದ ಸಪ್ಟಂಬರ್’ನಲ್ಲಿ ಚೀನಾದಲ್ಲಿ ನಡೆದ ಜಿ-20 ಸದಸ್ಯ ದೇಶಗಳ ಶೃಂಗಮೇಳದ ಸಂದರ್ಭದಲ್ಲಿ, ಅಮೆರಿಕಾ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ಪುತಿನ್’ಗೆ ವೈಯುಕ್ತಿಕವಾಗಿ ಭೇಟಿಯಾಗಿ ಎಚ್ಚರಿಸಿರುವುದಾಗಿಯೂ, ಇಲ್ಲದಿದ್ದರೆ ಗಂಭೀರವಾದ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಹೇಳಿದ್ದೇನೆಂದು ಒಬಾಮಾ ಹೇಳಿದ್ದಾರೆ.

ಈ ಕೃತ್ಯವು ರಷ್ಯಾ ಸರ್ಕಾರದ ಅಣತಿಯಂತೆ ಉನ್ನತ ಮಟ್ಟದಲ್ಲಿ ನಡೆದಿದೆ. ರಷ್ಯಾದಲ್ಲಿ ಪುತಿನ್ ಸಮ್ಮತಿಯಿಲ್ಲದೇ ಏನೂ ನಡೆಯುವುದಿಲ್ಲ, ಎಂದು ಒಬಾಮಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾವು ಹ್ಯಾಕಿಂಗ್ ಚಟುವಟಿಕೆಗಳ ಮೂಲಕ ಡೊನಾಲ್ಡ್ ಟ್ರಂಪ್ ಪರವಾಗಿ ಕೆಲಸ ಮಾಡಿದೆ ಎಂಬ ಗುಪ್ತಚರ ಇಲಾಖೆಯು ಬಹಿರಂಗಪಡಿಸತ್ತು.