ಉಮರ್ ಖಾಲಿದ್, ಶಾರ್ಜಿಲ್ ಜಾಮೀನು ರದ್ದು ಬೆನ್ನಲ್ಲೇ JNUನಲ್ಲಿ ಮೋದಿ, ಶಾ ವಿರೋಧಿ ಘೋಷಣೆ ಕೂಗಲಾಗಿದೆ. ದೆಹಲಿ ಗಲಭೆಯ ಆರೋಪಿಗಳು ಜೆನ್‌ಯು ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿದ್ದಾರೆ. ಇದರ ಹಿನ್ನಲೆಯಲ್ಲಿ ಎಡಪಂಥಿಯ ಸಂಘಟನೆಗಳು ನಿಯಮ ಬಾಹಿರ ಘೋಷಣೆ ಕೂಗಿದೆ.
ನವದೆಹಲಿ (ಜ.06) ದೆಹಲಿ ಗಲಭೆಗೆ ಷಡ್ಯಂತ್ರ, ಪ್ರಚೋಚನೆ ಸೇರಿದಂತೆ ಪ್ರಮುಖ ಪಾತ್ರವಹಿಸಿ ಜೈಲು ಸೇರಿರುವ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇತರ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಉಮರ್ ಖಾಲೀದ್ ಹಾಗೂ ಶಾರ್ಜಿಲ್ ಇಮಾಮ್ ಷಡ್ಯಂತ್ರ, ಲಭ್ಯವಿರುವ ಸಾಕ್ಷ್ಯಗಳು ಗಂಭೀರವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಎರಡಪಂಥೀಯ ಸಂಘಟನೆಗಳು, ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಜವಾಹರ್‌ಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು, ನಾಯಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಲಾಗಿದೆ. ವಿವಾದಾತ್ಮಕ ಹಾಗೂ ನಿಯಮ ಬಾಹಿರ ಘೋಷಣೆಗಳನ್ನು ಕೂಗಿದ್ದಾರೆ.
35 ನಿಮಿಗಳ ವಿಡಿಯೋ ವೈರಲ್
35 ನಿಮಿಷಗಳ ವಿಡಿಯೋ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮೋದಿ,ಶಾ ಕಿ ಕಬರ್ ಖುದೇಗಿ, ಜೆಎನ್‌ಯು ಕಿ ಧರ್ತಿ ಪರ್ ಎಂಬ ಘೋಷಣೆಗಳನ್ನು ಕೂಗಲಾಗಿದೆ. 2020ರ ದೆಹಲಿ ಗಲಭೆಗೂ ಇದೇ ಜೆನ್‌ಯು ಕ್ಯಾಂಪಸ್‌ನಲ್ಲಿ ಭಾರಿ ಪ್ರಚೋದನೆ ನೀಡುವ ಭಾಷಣಗಳು, ಷಡ್ಯಂತ್ರಗಳು ನಡೆದಿತ್ತು. ಬಳಿಕ ದೆಹಲಿ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಘಟನೆ ಸಂಬಂಧ ಹಲವರನ್ನು ಬಂಧಿಸಾಗಿದೆ. ಈ ಪೈಕಿ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಇದೀಗ ಜೈಲಿನಲ್ಲಿದ್ದಾರೆ. 2020ರ ಬಳಿಕ ಜೆನ್‌ಯು ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆಗಳು ಇಳಿಮುಖವಾಗಿತ್ತು. ಇದೀಗ ಮತ್ತೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ಘೋಷಣೆಗಳು ಮೊಳಗತೊಡಗಿದೆ.
ಇದೇ ಕ್ಯಾಂಪಸ್‌ನಲ್ಲಿ ಮೊಳಗಿತ್ತು ಭಾರತ ವಿಭಜನೆ ಘೋಷಣೆ
ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದು ಘೋಷಣೆ ಕೂಗಲಾಗಿತ್ತು ಪಾರ್ಲಿಮೆಂಟ್ ದಾಳಿ ಮಾಡಿದ ಅಫ್ಜಲ್ ಗುರು ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾರತ್ ತೇರಿ ತುಕ್ಡೆ ಹೋಂಗೆ ಇನ್‌ಶಾಲ್ಲ, ಇನ್‌ಶಾಲ್ಲ ಎಂಬ ಘೋಷಣೆಗಳು ಕೂಗಲಾಗಿತ್ತು. ಈ ಮೂಲಕ ಟುಕ್ಡೆ ಟುಕ್ಡೆ ಗ್ಯಾಂಗ್ ಭಾರಿ ಕೋಲಾಹಲ ಸೃಷ್ಟಿಸಿತ್ತು.
ಘೋಷಣೆ ಖಂಡಿಸಿದ ಎಬಿವಿಪಿ ಸಂಘಟನೆ
ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕೂಗಿರುವ ಘೋಷಣೆಗಳನ್ನು ಜೆಎನ್‌ಯುವಿನ ಎಬಿವಿಪಿ ಸಂಘಟನೆ ಖಂಡಿಸಿದೆ. ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ, ಮೋದಿ, ಅಮಿತ್ ಶಾ ವಿರೋಧಿ ಘೋಷಣೆಗಳು ಮೊಳಗತೊಡಗಿದೆ. ಈ ಹಿಂದೆ ಇದೇ ರೀತಿ ಘೋಷಣೆ ಬಳಿಕ ಸಂದರ್ಭ ಬಳಸಿಕೊಂಡು ಗಲಭೆಯನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಈ ಬಾರಿ ತೀವರ್ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಅಪಾಯ ಎದುರಾಗಲಿದೆ ಎಂದು ಎಬಿವಿಪಿ ಎಚ್ಚರಿಸಿದೆ.
ದೆಹಲಿ ಪೊಲೀಸರು ಅಲರ್ಟ್
ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೂಗಿದ ಘೋಷಣೆಗಳ ವಿಡಿಯೋ ದೆಹಲಿ ಪೊಲೀಸರ ಕೈಸೇರಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ವಿಡಿಯೋ ಆಧರಿಸಿ ತನಿಖೆ ನಡೆಸಲಾಗುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ತಕ್ಷಣವೇ ಈ ಘೋಷಣೆ ಕೂಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.


