ಕಂಚ್ರಾಪಾರ[ಜೂ.15]: ಪಶ್ಚಿಮ ಬಂಗಾಳಕ್ಕೆ ಬಂದು ನೆಲೆಸುವ ಪ್ರತಿಯೊಬ್ಬ ನಾಗರಿಕ ಸಹ ಬಂಗಾಳಿಯನ್ನು ಕಲಿಯಲೇಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಚಿಸಿದ್ದಾರೆ.

ಶುಕ್ರವಾರ ಇಲ್ಲಿನ ಪಕ್ಷದ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಅವರು, ‘ಯಾವುದೇ ಕಾರಣಕ್ಕೂ ನಾವು ಪಶ್ಚಿಮ ಬಂಗಾಳವನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರೂರಾದ ಗುಜರಾತ್‌ ಆಗಲು ಬಿಡುವುದಿಲ್ಲ. ಬಂಗಾಳದಲ್ಲೇ ಬಂಗಾಳಿಗಳಿಗೆ ನೆಲೆ ಇಲ್ಲದಂಥ ಸ್ಥಿತಿಯನ್ನು ಎಂದಿಗೂ ಬಾರದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ನಾವು ದೆಹಲಿ, ಬಿಹಾರ, ಪಂಜಾಬ್‌ ಹಾಗೂ ಉತ್ತರ ಪ್ರದೇಶಕ್ಕೆ ಹೋದಾಗ, ಆಯಾ ರಾಜ್ಯಗಳ ಭಾಷೆಯನ್ನೇ ಮಾತನಾಡುತ್ತೇನೆ. ಹಾಗೆಯೇ ಬಂಗಾಳಕ್ಕೆ ಬರುವವರೆಲ್ಲರೂ ಬಂಗಾಳಿ ಭಾಷೆ ಕಲಿಯಲೇಬೇಕು. ಹೊರಗಿನವರು ಬಂದು ಬಂಗಾಳಿಗಳ ಮೇಲೆ ದಬ್ಬಾಳಿಕೆ ನಡೆಸಲು ನಾವು ಬಿಡುವುದಿಲ್ಲ ಎಂದು ಇದೇ ವೇಳೆ ಬ್ಯಾನರ್ಜಿ ಗುಡುಗಿದರು.