ಸೆಪ್ಟೆಂಬರ್‌ನಿಂದ ವಾಲ್ಶ್ ಬಾಂಗ್ಲಾ ತಂಡದ ವಿಶೇಷ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ವೆಸ್ಟ್ ಇಂಡೀಸ್ನ ಮಾಜಿ ವೇಗದ ಬೌಲರ್ ಕರ್ಟ್ನಿ ವಾಲ್ಶ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ವಾಲ್ಶ್ ಬಿಸಿಬಿಯೊಂದಿಗೆ 3 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ವಾಲ್ಶ್ ಈ ಹಿಂದೆ ವಿಂಡೀಸ್ ತಂಡದ ಆಯ್ಕೆ ಸಮಿತಿಯಲ್ಲಿದ್ದರು. ಆಗಸ್ಟ್ ಅಂತ್ಯದಲ್ಲಿ ವಾಲ್ಶ್ ಅವಧಿ ಪೂರ್ಣಗೊಂಡಿತು. ಹೀಗಾಗಿ ಸೆಪ್ಟೆಂಬರ್ನಿಂದ ವಾಲ್ಶ್ ಬಾಂಗ್ಲಾ ತಂಡದ ವಿಶೇಷ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
‘‘ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿರುವುದು ಹೆಚ್ಚಿನ ಉತ್ಸಾಹ ತಂದಿದೆ. ಪ್ರಮುಖ ಕೋಚ್ ಚಂದಿಕಾ ಹತುರಸಿಂಘ ಅವರ ಗರಡಿಯಲ್ಲಿ ಸಾಕಷ್ಟು ಯುವ ವೇಗಿಗಳು ಪಳಗಿದ್ದಾರೆ. ಇನ್ನು ಉತ್ತಮ ತರಬೇತಿ ನೀಡುವ ವಿಶ್ವಾಸವಿದೆ’’ ಎಂದು ವಾಲ್ಶ್ ಹೇಳಿದ್ದಾರೆ.
