ನಾನು ಪಕ್ಷ ಬಿಟ್ಟಿದ್ದೇನೇ ಹೊರತು ರಾಜಕೀಯ ಬಿಟ್ಟಿಲ್ಲ, ನನ್ನ ಜೊತೆ ಬನ್ನಿ ಅಂತಾ ಯಾರನ್ನು ಕರೆದಿಲ್ಲ ಹಾಗೂ ಹೊಸ ಪಕ್ಷ ಕಟ್ಟುವ ಆಲೋಚನೆಯೂ ನನಗಿಲ್ಲವೆಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಮದ್ದೂರು (ಜ.30): ಯಡಿಯೂರಪ್ಪ ನನ್ನನು ಭೇಟಿ ಮಾಡಲು ಸಮಯ ಕೇಳಿರುವುದು ಎಲ್ಲಾ ಊಹಾಪೋಹ, ನನ್ನ ಮುಂದಿನ ನಡೆ ಏನೆಂಬದನ್ನು ಕಾದು ನೋಡಿ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಡ್ಯ ಜಿಲ್ಲೆ ಮತ್ತು ಮದ್ದೂರು ನನ್ನ ತವರು ಕ್ಷೇತ್ರ, ನಾನು ಮೊದಲು ಕಾಂಗ್ರೆಸ್ ವಿರುದ್ದವೇ ಗೆದ್ದು ಬಂದವನು ಎಂದು ಅವರು ಹೇಳಿದ್ದಾರೆ.

ನಾನು ಪಕ್ಷ ಬಿಟ್ಟಿದ್ದೇನೇ ಹೊರತು ರಾಜಕೀಯ ಬಿಟ್ಟಿಲ್ಲ, ನನ್ನ ಜೊತೆ ಬನ್ನಿ ಅಂತಾ ಯಾರನ್ನು ಕರೆದಿಲ್ಲ ಹಾಗೂ ಹೊಸ ಪಕ್ಷ ಕಟ್ಟುವ ಆಲೋಚನೆಯೂ ನನಗಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಬಲಿಗರೊಂದಿಗೆ ಸಭೆ ನಡೆಸಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಹೇಳಿದ್ದಾರೆ.