ಆಫರ್ ಇನ್ನು ಇದೆ ಎಂದು ಎಲ್ಲ ಜಿಯೋ ಮಳಿಗೆಗಳಲ್ಲಿ ಪ್ರಕಟಣೆಗಳು ಇನ್ನು ರಾರಾಜಿಸುತ್ತಿವೆ.

ನವದೆಹಲಿ(ಏ.10): ಈಗ ಘೋಷಿಸಿರುವ ಸಮ್ಮರ್ ಸರ್'ಪ್ರೈಸ್ ಹಾಗೂ ಮುಂದಿನ ಒಂದು ವರ್ಷಗಳ ಕಾಲ ನೀಡಲಿರುವ ಜಿಯೋ ಆಫರ್'ಗಳು ಕೊನೆಯಾಗುತ್ತಾ ? ಅಂತಹದೊಂದು ಅನುಮಾನಗಳು ಈಗ ವ್ಯಕ್ತವಾಗುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವು ದಿನಗಳ ಹಿಂದಷ್ಟೆ ಟ್ರಾಯ್ ಸೂಚನೆಯಂತೆ 3 ತಿಂಗಳು ಉಚಿತ ಸೌಲಭ್ಯವಿರುವ ಸಮ್ಮರ್ ಸರ್'ಪ್ರೈಸ್ ಆಫರ್'ಅನ್ನು ನಿಲ್ಲಿಸುವುದಾಗಿ ಜಿಯೋ ಎಲ್ಲಡೆ ಪ್ರಕಟಣೆ ನೀಡಿತ್ತು. ಆದರೆ ಈ ಸೂಚನೆಗಳು ಎಲ್ಲೂ ಕಾಣುತ್ತಿಲ್ಲ. ಆಫರ್ ಇನ್ನು ಇದೆ ಎಂದು ಎಲ್ಲ ಜಿಯೋ ಮಳಿಗೆಗಳಲ್ಲಿ ಪ್ರಕಟಣೆಗಳು ಇನ್ನು ರಾರಾಜಿಸುತ್ತಿವೆ.

ಜಿಯೋದ ಈ ಇಬ್ಬಗೆ ನೀತಿ ಹಾಗೂ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮತ್ತೊಂದು ಟೆಲಿಕಾಂ ಸಂಸ್ಥೆಯಾದ ವೊಡಫೋನ್ ಟ್ರಾಯ್'ಗೆ ದೂರು ನೀಡಿದೆ. ಇದೆನಾದರೂ ಗಂಭೀರ ಸ್ವರೂಪ ಪಡೆದು ಕೋರ್ಟ್'ವರೆಗೂ ಹೋದರೆ ಈಗ ನೀಡುವ ಹಾಗೂ ಮುಂದಿನ ಆಫರ್'ಗಳನ್ನು ಕೊನೆಗೊಳ್ಳುವ ಸಾಧ್ಯತೆಯಿದೆ.

ಮತ್ತೊಂದು ಟೆಲಿಕಾಂ ಸಂಸ್ಥೆ ಏರ್'ಟೆಲ್ ಕೂಡ ಟ್ರಾಯ್ ಅಧ್ಯಕ್ಷರನ್ನು ಭೇಟಿ ಮಾಡಿದ್ದು ಜಿಯೋದ ನಿಯಮ ಉಲ್ಲಂಘನೆಯನ್ನು ಪ್ರಸ್ತಾಪಿಸಿದೆ. ಎಲ್ಲ ಟೆಲಿಕಾಂ ಸಂಸ್ಥೆಗಳು ಈ ವಿಷಯವನ್ನು ದೊಡ್ಡದು ಮಾಡಿದರೆ ಉಚಿತ ಸೌಲಭ್ಯಗಳು ಗ್ರಾಹಕರಿಂದ ಮಿಸ್ ಆಗುವುದು ಗ್ಯಾರಂಟಿ.