ಶ್ರೀಕೃಷ್ಣ ಮಠಕ್ಕೆ ಸಿಎಂ ಬರುವುದಿಲ್ಲ ಎಂದು ಗೊತ್ತಾಗಿ ಈ ಬಾರಿ ಆಹ್ವಾನಿಸಿಲ್ಲ. ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇಲ್ಲ ಎಂದ ಮೇಲೆ ಈ ಬಾರಿ ಆಹ್ವಾನವನ್ನು ನೀಡಿಲ್ಲ.

ಉಡುಪಿ(ನ.20): ಶ್ರೀಕೃಷ್ಣ ಮಠಕ್ಕೆ ಹೋಗಬೇಡಿ ಎಂದು ಸಿಎಂಗೆ ಬುದ್ಧಿಜೀವಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಪೇಜಾವರ ಮಠದ ಪೀಠಾಧಿಪತಿ ವಿಶ್ವೇಶತೀರ್ಥ ಸ್ವಾಮೀಜಿ ಆಪಾದನೆ ಮಾಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಕೆಲವು ಬುದ್ಧಿಜೀವಿಗಳಿಗೆ ಶ್ರೀಕೃಷ್ಣ ಮಠ ಎಂದರೆ ಆಗುವುದಿಲ್ಲ. ಪೇಜಾವರ ಶ್ರೀಗಳನ್ನು ಕಂಡರೆ ನಮ್ಮಲ್ಲಿನ ಕೆಲ ಬುದ್ಧಿಜೀವಿಗಳಿಗೂ ಆಗಲ್ಲ.

ಶ್ರೀಕೃಷ್ಣ ಮಠ ಭೇಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಆಹ್ವಾನಿಸಿದರೂ ಅವರು ಬಂದೇ ಇಲ್ಲ. ಶ್ರೀಕೃಷ್ಣ ಮಠಕ್ಕೆ ಸಿಎಂ ಬರುವುದಿಲ್ಲ ಎಂದು ಗೊತ್ತಾಗಿ ಈ ಬಾರಿ ಆಹ್ವಾನಿಸಿಲ್ಲ. ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇಲ್ಲ ಎಂದ ಮೇಲೆ ಈ ಬಾರಿ ಆಹ್ವಾನವನ್ನು ನೀಡಿಲ್ಲ. ಮುಂದೊಮ್ಮೆ ಬರುತ್ತೇನೆ ಎಂಬ ಆಶ್ವಾಸನೆಯನ್ನೂ ಸಿದ್ದರಾಮಯ್ಯ ನೀಡಿಲ್ಲ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವು ಹಲವು ಬಾರಿ ಭೇಟಿ ಮಾಡಿದ್ದಾನೆ' ಎಂದು ತಿಳಿಸಿದರು.