ಬೆಂಗಳೂರು(ಅ.14): ನಾಗರ ಹಾವು ವೀಕ್ಷಣೆ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಗರುಡಾ ಸ್ವಾಗತ್​ ಮಾಲ್​​​ನಲ್ಲಿ ನಡೆದಿದೆ. ಜಯನಗರದ ನಿವಾಸಿ ವಿಷ್ಣು ಅಭಿಮಾನಿ ಸುಬ್ರಮಣಿ ಮೃತರು. ಗರುಡಾ ಸ್ವಾಗತ್​​ ಮಾಲ್​​​ ಚಿತ್ರ ವೀಕ್ಷಿಸುತ್ತಿದ್ದಾಗ ವಿಷ್ಣು ಆಗಮನದ ಆರಂಭದ ದೃಶ್ಯದಲ್ಲಿ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.