ಕೊಹ್ಲಿ ಹಾಗೂ ಅವರ ಆಪ್ತ ಸ್ನೇಹಿತ ಶಿಖರ್ ಧವನ್, ದ.ಆಫ್ರಿಕಾದಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಕೇಪ್'ಟೌನ್(ಜ.01): ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ , ಪತ್ನಿ ಅನುಷ್ಕಾ ಜತೆ ಹೊಸ ವರ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸುತ್ತಿದ್ದಾರೆ.
ಭಾನುವಾರ ಅಭ್ಯಾಸದ ಬಳಿಕ ಕೊಹ್ಲಿ, ಅನುಷ್ಕಾ ಜತೆ ಇಲ್ಲಿನ ಮಾಲ್'ವೊಂದಕ್ಕೆ ಶಾಪಿಂಗ್‌ಗೆ ತೆರಳಿದ್ದರು. ಕೊಹ್ಲಿಯನ್ನು ಪತ್ತೆ ಹಿಡಿದ ಕೆಲ ಅಭಿಮಾನಿಗಳು, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ತಾಣಗಳಲ್ಲಿ ಹಾಕಿದ್ದು, ಫೋಟೋ ವೈರಲ್ ಆಗಿದೆ.
ರಸ್ತೆಯಲ್ಲೇ ಕೊಹ್ಲಿ-ಧವನ್ ನೃತ್ಯ: ಕೊಹ್ಲಿ ಹಾಗೂ ಅವರ ಆಪ್ತ ಸ್ನೇಹಿತ ಶಿಖರ್ ಧವನ್, ದ.ಆಫ್ರಿಕಾದಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಕೇಪ್'ಟೌನ್'ನ ರಸ್ತೆಯಲ್ಲಿ ಸ್ಥಳೀಯ ಕಲಾವಿದರು ಸಂಗೀತಕ್ಕೆ ಕೊಹ್ಲಿ-ಧವನ್ ಭಾಂಗ್ರಾ (ಪಂಜಾಬಿ ನೃತ್ಯ) ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
