ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ತನ್ನಷ್ಟಕ್ಕೆ ತಾನೇ ಸರ್ವಾಧಿಕಾರಿ ಅಂದು ಕೊಂಡುಬಿಟ್ಟಿದ್ದಾರೆ. ತಾನು ಏನು ಮಾಡಿದ್ರೂ ನಡಿಯುತ್ತೆ ಅಂದುಕೊಂಡುಬಿಟ್ಟಿದ್ದಾರೆ. ತಂಡಕ್ಕೆ ಬರುವ ಆಟಗಾರರನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಳ್ಳುವ ಮೂಲಕ ನಾಯಕತ್ವವನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೊಹ್ಲಿ ಟೀಂ ಇಂಡಿಯಾದಲ್ಲಿ ಮಾಡುತ್ತಿರುವ ದರ್ಪ ಎಂಥದ್ದು? ಇಲ್ಲಿದೆ ವಿವರ.

ಮುಂಬೈ(ಸೆ.01): ವಿರಾಟ್​​​ ಕೊಹ್ಲಿ, ಈತ ಟೀಂ ಇಂಡಿಯಾದ ಬೆಸ್ಟ್​​​ ಕ್ಯಾಪ್ಟನ್​ ಎನ್ನುವುದರಲ್ಲಿ ಅನುಮಾನವಿಲ್ಲ​​​​. ತಾನೂ ಉತ್ತಮ ಪ್ರದರ್ಶನ ನೀಡದಿದ್ದರೂ ಉಳಿದ ಆಟಗಾರರ ಯಶಸ್ಸನ್ನು ಮನಸಾರೆ ಆನಂದಿಸುತ್ತಾರೆ. ಅದನ್ನ ನೀವೂ ನೋಡಿರ್ತಿರಿ. ಯಾರೆ ಶತಕ ಅಥವಾ ಉತ್ತಮ ಇನ್ನಿಂಗ್ಸ್​​ ಆಡಿದ್ರೆ ಡ್ರೆಸ್ಸಿಂಗ್ ರೂಮ್​​ನಲ್ಲಿ ಕೂತು ಅವರೇ ಶತಕ ಸಿಡಿಸಿದರೇನೋ ಎಂಬಂತೆ ಸಂಭ್ರಮಿಸುತ್ತಾರೆ. ಇನ್ನೂ ಯಾರಾದರೂ ಔಟಾಗಿಬಿಟ್ಟರೆ ಮುಗಿದೇ ಹೊಯ್ತು ಕೊಹ್ಲಿಯನ್ನ ನೋಡೋದಕ್ಕೆ ಆಗೋದಿಲ್ಲ. ಇಂತಹ ನಾಯಕನನ್ನ ಪಡೆಯಲು ಆಟಗಾರರು ಪುಣ್ಯ ಮಾಡಿರಬೇಕು ಅಂದುಕೊಳ್ಳುವುದು ಸಹಜ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ಕೊಹ್ಲಿ ಕುರಿತಾಗಿ ನಮ್ಮಲ್ಲಿರುವ ಭಾವನೆಯೇ ಬದಲಾಗುತ್ತದೆ.

ನಿನ್ನೆ ಪಂದ್ಯಕ್ಕೂ ಮುನ್ನ ನಡೆಯಿತು ಶಾಕಿಂಗ್​ ಘಟನೆ

ಶ್ರೀಲಂಕಾ ವಿರುದ್ಧದ ನಿನ್ನೆಯ ಪಂದ್ಯಕ್ಕೂ ಮುನ್ನ ಶರ್ದೂಲ್​ ಠಾಕೂರ್​​'ಗೆ ಟೀಂ ಇಂಡಿಯಾ ಕ್ಯಾಪ್​ ಅನ್ನು ನೀಡಲಾಯ್ತು. ತಂಡದ ಕೋಚ್​​​ ರವಿಶಾಸ್ತ್ರಿ ಡೆಬ್ಯು ಮ್ಯಾನ್​​'ಗೆ ಕ್ಯಾಪ್​ ನೀಡಿ ಶುಭಕೋರಿದ್ರು. ಈ ವೇಳೆ ನಾಯಕ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಮೈದಾನದಲ್ಲೇ ಇದ್ದರು. ಶಾಸ್ತ್ರಿಯಿಂದ ಕ್ಯಾಪ್​ ಪಡೆಯಲು ಶರ್ದೂಲ್​ ಖುಷಿಯಿಂದಲೇ ಮುಂದಾದ್ರು. ಆ ವೇಳೆ ಹಿಂಬದಿಯಿಂದ ಶರ್ದೂಲ್​​'ಗೆ ವಿರಾಟ್ ಕಾಲಿನಲ್ಲಿ ಒದ್ದರು. ಪಾಪಾ ಠಾಕೂರ್ ಏನೂ ಮಾತನಾಡದೆ ಕೊಹ್ಲಿಗೆ ಥ್ಯಾಂಕ್ಸ್ ಹೇಳಿದ್ರು.

ಈ ವಿಡಿಯೋ ಇಡೀ ಭಾರತೀಯರನ್ನೇ ಬೆಚ್ಚಿ ಬೀಳಿಸಿತ್ತು. ಟಿವಿಯಲ್ಲಿ ಎಲ್ಲಾ ಆಟಗಾರರನ್ನ ಸಪೋರ್ಟ್​ ಮಾಡಿದ್ದ ಕೊಹ್ಲಿ ಇವರೇನಾ ಅಂತ ಬಾಯಿಯ ಮೇಲೆ ಬೆರಳಿಟ್ಟುಕೊಂಡ್ರು. ಅಷ್ಟೇ ಅಲ್ಲ ತಂಡಕ್ಕೆ ಎಂಟ್ರಿ ಕೊಡೋ ಯುವ ಆಟಗಾರರಿಗೆ ಹೇಗೆಲ್ಲಾ ನಡೆಸಿಕೊಳ್ಳಲಾಗುತ್ತೆ ಎಂಬುದನ್ನ ಜಗಜಾಹೀರು ಮಾಡಿಬಿಟ್ರು. ಇಡೀ ದೇಶವೇ ಅವರನ್ನ ದೂಷಿಸುವಂತೆ ಮಾಡಿಕೊಂಡು ಬಿಟ್ರು.

ಇದು ತುಂಟತನವೋ..? ನಾಯಕನ ದಬ್ಬಾಳಿಕೆಯೋ..?

ಈ ವಿಡಿಯೋ ನೋಡಿದ ಕೆಲವರು ಕೊಹ್ಲಿ ವಿರುದ್ಧ ಟೀಕೆಗಳನ್ನ ಮಾಡುತ್ತಿದ್ದರೆ, ಕೆಲ ಕೊಹ್ಲಿಯ ಕಟ್ಟ ಅಭಿಮಾನಿಗಳು ಇದು ತುಂಟತನವಷ್ಟೇ ಎಂದು ಬಿಂಬಿಸಿದ್ರು. ಆದ್ರೆ ಇದನ್ನ ನಾವು ಒಪ್ಪೋಕೆ ಸಾಧ್ಯವೇ ಇಲ್ಲ. ಕಾರಣ ಎಷ್ಟೇ ತುಂಟತನವಿದ್ರೂ ಈ ರೀತಿ ಯಾರು ಮಾಡೋದಕ್ಕೆ ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಕಾಲು ತೋರಿಸುವುದೇ ತಪ್ಪು ಇನ್ನೂ ಕಾಲಿನಿಂದ ಒದ್ರೆ..?

Scroll to load tweet…

ಕೊಹ್ಲಿ ಈ ರೀತಿ ದಬ್ಬಾಳಿಕೆ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅಂದ್ರೆ ಕಳೆದ ವರ್ಷ ನಡೆದ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​​ ಸರಣಿ ವೇಳೆ ಯುವ ಆಟಗಾರ ಜಯಂತ್​ ಯಾದವ್​​​'ರ ಗುಪ್ತಾಂಗಕ್ಕೆ ಹೊಡೆದಿದ್ದರು.

ಕೊಹ್ಲಿಯ ದಬ್ಬಾಳಿಕೆಯನ್ನ. ಟೀಂ ಇಂಡಿಯಾ ನಾಯಕ ತನ್ನಷ್ಟಕ್ಕೆ ತನ್ನನ್ನೇ ಸರ್ವಾಧಿಕಾರಿ ಅಂದುಕೊಂಡು ಬಿಟ್ಟಿದ್ದಾನೆ. ಅವನು ಏನ್​ ಮಾಡಿದ್ರು ನಡೆಯುತ್ತೆ ಅಂದುಕೊಂಡುಬಿಟ್ಟಿದ್ದಾನೆ. ಆದ್ರೆ ಈ ರೀತಿ ಮೆರದವರಲ್ಲಾ ಏನಾದ್ರೂ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನ ಅರಿತು ಕೊಹ್ಲಿ ಬದಲಾದ್ರೆ ಒಳಿತು. ಇಲ್ಲವಾದ್ರೆ ಅವರ ಮಹಾಪತನ ಸದ್ಯದಲ್ಲೇ ಶುರುವಾಗಲಿದೆ.