1) ಬ್ರಾಡ್ಮನ್ to ಸಚಿನ್; ಕೊಹ್ಲಿ ದ್ವಿಶತಕಕ್ಕೆ ದಿಗ್ಗಜರ ದಾಖಲೆ ಪುಡಿ ಪುಡಿ!

ಸೌತ್ ಆಫ್ರಿಕಾ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೊಹ್ಲಿ ಡಬಲ್ ಸೆಂಚುರಿ ಸಿಡಿಸೋ ಮೂಲಕ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಮಾತ್ರವಲ್ಲ, ಆಸ್ಟ್ರೇಲಿಯಾ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆ ಪುಡಿ ಮಾಡಿದ್ದಾರೆ. 

2) ಪಿಒಕೆ ಬಿಡುವಂತೆ ಕ್ಸಿಗೆ 56 ಇಂಚಿನ ಎದೆಯುಳ್ಳ ಪ್ರಧಾನಿ ಹೇಳಿದ್ರಾ?: ಕಾಂಗ್ರೆಸ್!

ಕಾಶ್ಮೀರ ವಿಚಾರ ತಮ್ಮ ಗಮನದಲ್ಲಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಚೀನಾಗೆ ಸೂಕ್ತ ಪ್ರತಿಕ್ರಿಯೆ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಕಾಶ್ಮೀರ ಕುರಿತು ಸೊಲ್ಲೆತ್ತುವ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರಿಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾಲ್ತೆಗೆಯುವಂತೆ ನಮ್ಮ 56 ಇಂಚಿನ ಪ್ರಧಾನಿ ಮೋದಿ ಹೇಳಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ

3) ಚುನಾವಣೆಗೂ ಮುನ್ನ ಸ್ವಪಕ್ಷೀಯರಿಂದಲೇ ಶಿವಸೇನೆಗೆ ಬಿಗ್‌ ಶಾಕ್‌!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಗೆ ಭಾರೀ ಆಘಾತ ಉಂಟಾಗಿದೆ. ಕಲ್ಯಾಣ್‌ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಶಿವಸೇನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

4) ಸರ್ಕಾರ ನಡೆಯಲು ಬಿಡಲ್ಲ: ಸಿದ್ದು ಎಚ್ಚರಿಕೆ!

ನೆರೆಪೀಡಿತರ ಸಂಕಷ್ಟಹಾಗೂ ಪರಿಹಾರ ಕಾರ್ಯದಲ್ಲಿ ವಿಳಂಬ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಲು ಮುಂದಾದ ಪ್ರತಿಪಕ್ಷಕ್ಕೆ ಅವಕಾಶ ನೀಡದೆ ಬಜೆಟ್‌ ಕುರಿತ ಪೂರಕ ಅಂದಾಜು ಮಂಡನೆಗೆ ಸ್ಪೀಕರ್‌ ಅವಕಾಶ ನೀಡಿದ್ದು ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಗುರುವಾರ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.


5) ಪುಣೆ ಟೆಸ್ಟ್; ಬೃಹತ್ ಮೊತ್ತ ಸಿಡಿಸಿ ಭಾರತ ಇನಿಂಗ್ಸ್ ಡಿಕ್ಲೇರ್!


ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ. ಕೊಹ್ಲಿ ದ್ವಿಶತಕ, ಜಡೇಜಾ ಸ್ಫೋಟಕ 91 ರನ್ ನೆರವಿನಿಂದ ಟೀಂ ಇಂಡಿಯಾ 2ನೇ ದಿನವೂ ಅಬ್ಬರಿಸಿತು

6) ಡಿಕೆ ಬ್ರದರ್ಸ್ ಗೆ ಮತ್ತೊಂದು ಸಂಕಷ್ಟ; ಕನಕಪುರದಲ್ಲಿ ನಡೆದಿತ್ತಾ ಅಕ್ರಮ ಗಣಿಗಾರಿಕೆ?

ಡಿಕೆ ಬ್ರದರ್ಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2002- 2012 ವರೆಗೆ 10 ವರ್ಷಗಳ ಕಾಲ ಮೈಸೂರು ಮಿನರಲ್ಸ್ ಹೆಸರಿನಲ್ಲಿ ಗಣಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಅರಣ್ಯಾಧಿಕಾರಿಗಳು ಕೊಟ್ಟ ವರದಿಯಲ್ಲಿ ಇದು ಬಹಿರಂಗವಾಗಿದೆ. ಡಿಕೆ ಸಹೋದರರ ಮೇಲೆ ಅರಣ್ಯ ಇಲಾಖೆ 12 ಕೇಸ್ ಹಾಕಿದೆ. 

7) ಅಗ್ನಿಸಾಕ್ಷಿ ಬಿಟ್ಟು IAS ಅಧಿಕಾರಿ ಆಗ್ತಾರಾ ಅಂಜಲಿ?...

ನಗು ನಗುತ್ತಾ ಸಿದ್ದಾರ್ಥ್ ಮುದ್ದಿನ ತಂಗಿಯಾಗಿ ಪ್ರೇಕ್ಷಕರ ಮನೆ ಮಗಳಾಗಿ ಕಾಣಿಸಿಕೊಳ್ಳುವ ಸುಂದರಿ ಅಂಜಲಿ ಅಲಿಯಾಸ್ ಸುಕೃತಾ ನಾಗ್‌ ರಿಯಲ್‌ ಲೈಫ್‌ನಲ್ಲಿ ಸಿನಿ  ಜರ್ನಿ ಶುರುವಾಗಿದ್ದು ರೋಚಕ. ಅಂಜರಿ ಮಂಡ್ಯ to ಬೆಂಗಳೂರು ಜರ್ನಿ ಇಲ್ಲಿದೆ.

8) ಮಂಗಳೂರು: ಈ ಮೀನಿಗೂ, ಕಾರ್ಗಿಲ್‌ ಯುದ್ಧಕ್ಕೂ ಇದೆ ಸಂಬಂಧ!...

ಇತ್ತೀಚೆಗೆ ಕಾರವಾರದಲ್ಲಿ ಹಾಗೂ ಮಲ್ಪೆಯಲ್ಲಿ ಯಥೇಚ್ಛವಾಗಿ ಲಭ್ಯವಾದ ಕಾರ್ಗಿಲ್ ಮೀನಿನ ಹೆಸರು ಕಾರ್ಗಿಲ್ ಯುದ್ಧವನ್ನು ನೆನಪಿಸುತ್ತದಲ್ಲವೇ..? ಹೌದು. ಕಾರ್ಗಿಲ್ ಯುದ್ಧಕ್ಕೂ ಈ ಮೀನಿಗೂ ಸಂಬಂಧವಿದೆ. ಇದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ

9) ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!

ಚಂದ್ರಯಾನ-2 ನೌಕೆ ಸೌರಜ್ವಾಲೆಗಳನ್ನು ಗುರುತಿಸಿದ್ದು, 24 ಗಂಟೆಗಳ ಅವಧಿಯಲ್ಲಿ ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರಜ್ವಾಲೆಗಳನ್ನು ಚಂದ್ರಯಾನ-2 ನೌಕೆ ಸೆರೆ ಹಿಡಿದಿದೆ. ನೌಕೆಯ ಸೋಲಾರ್ ಎಕ್ಸ್ ರೇ ಮಾನಿಟರ್(XSM) ಸೌರಜ್ವಾಲೆಗಳನ್ನು ಗುರುತಿಸಿದೆ.

10) ಮತ್ತೆ ರಸ್ತೆಗಳಿಯುತ್ತಿದೆ ಹಮಾರ ಬಜಾಜ್; ಅ.16ಕ್ಕೆ ಚೇತಕ್ ಇ ಸ್ಕೂಟರ್ ಲಾಂಚ್!

ಬಜಾಜ್ ಚೇತಕ್ ಸ್ಕೂಟರ್ ಮತ್ತೆ ರಸ್ತೆಗಿಳಿಯುತ್ತಿದೆ. 80ರ ದಶಕದಲ್ಲಿ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಐತಿಹಾಸಿಕ ಹೆಸರಿನಲ್ಲಿ ನೂತನ ಸ್ಕೂಟರ್ ಅಕ್ಟೋಬರ್11 ರಂದು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.