ವಿರುಷ್ಕಾ ಜೋಡಿಯಿಂದ ಗುಡ್ ನ್ಯೂಸ್, ಇಳಿಕೆಯಾಯ್ತು ಗೋಲ್ಡ್ ಪ್ರೈಸ್; ಆ.27ರ ಟಾಪ್ 10 ನ್ಯೂಸ್!
ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಗುಡ್ ನ್ಯೂಸ್ ನೀಡಿದ್ದಾರೆ. ಪಾತಕಿ ಮುಖ್ತಾರ್ ಅನ್ಸಾರಿಯ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡೋ ಮೂಲಕ ಯೋಗಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ. ಡಿಜೆ ಹಳ್ಳಿ ಹಾಗೂ ಕಡಜಿ ಹಳ್ಳಿ ಗಲಭೆ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ. ಇತ್ತ ಗಗನಕ್ಕೇರಿದ ಚಿನ್ನದ ಬೆಲೆ ಇಳಿಕೆಯಾಗಿದೆ. ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದ ಆರೋಪದಡಿ ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್, ಹೊಂಡಾದಿಂದ ಎಲೆಕ್ಟ್ರಿಕ್ ಕಾರು ಸೇರಿದಂತೆ ಆಗಸ್ಟ್ 27ರ ಟಾಪ್ 10 ಸುದ್ದಿ ಇಲ್ಲಿವೆ.
ಯೋಗಿ ಸರ್ಕಾರದ ದಿಟ್ಟ ಕ್ರಮ, ಪಾತಕಿಯ ಮನೆ ನೆಲಸಮ!...
ದಿಟ್ಟ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಮೊದಲಿನಿಂದಲೂ ಹೆಸರುವಾಸಿ. ಗಲಭೆಕೋರರಿಂದಲೇ ನಷ್ಟ ವಸೂಲಿ ಮಾಡುವುದಕ್ಕೂ ರಾಜಿ ಮಾಡಿಕೊಂಡಿಲ್ಲ. ಪಾತಕಿ ಮುಖ್ತಾರ್ ಅನ್ಸಾರಿಯ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
ಬೆಂಗಳೂರು ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಸಮೀವುದ್ದೀನ್ ಫೋನ್‌ನಲ್ಲಿ ಸ್ಫೋಟಕ ಮಾಹಿತಿ!...
ಡಿಜೆ ಹಳ್ಳಿ ಹಾಗೂ ಕಡಜಿ ಹಳ್ಳಿ ಗಲಭೆ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ. ಉಗ್ರರ ಸಂಪರ್ಕದಲ್ಲಿದ್ದ ಸಮೀವುದ್ದೀನ್ ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
ಗ್ಯುಡ್ ನ್ಯೂಸ್ ನೀಡಿದ ವಿರುಷ್ಕಾ - 2021 ಜನವರಿಗೆ ಬರಲಿರುವ ಹೊಸ ಅತಿಥಿ
ಕರೀನಾ ಕಪೂರ್ ಪ್ರೆಗ್ನೆಂಸಿ ನ್ಯೂಸ್ ನಂತರ, ಈಗ ಬಾಲಿವುಡ್‌ನ ಇನೊಬ್ಬ ಸ್ಟಾರ್ ತಾಯಿಯಾಗಲಿರುವ ಸಿಹಿ ಸುದ್ದಿ ಹೊರ ಬಿದ್ದಿದೆ. ನಟಿ ಅನುಷ್ಕ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫ್ಯಾಮಿಲಿ ಬೆಳೆಯುತ್ತಿರುವ ವಿಷಯ ಹಂಚಿಕೊಂಡಿದ್ದಾರೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ 2021ರ ಜನವರಿಯಲ್ಲಿ ತಮ್ಮ ಮಗು ಬರಲಿದೆ ಎಂದು ಹೇಳಿಕೊಂಡಿದ್ದು, ಬಾಲಿವುಡ್ ನಟರ, ಕ್ರಿಕೆಟಿಗರ ಶುಭ ಹಾರೈಕೆಗಳು ಹರಿದು ಬರುತ್ತಿವೆ.
'ಪರಿಸರ ಪ್ರೇಮಿ' ಸೋಗಿನಲ್ಲಿ ಕಾಡು ಪ್ರಾಣಿ ಬೇಟೆಯಾಡಿದ ಕಾಂಗ್ರೆಸ್ ಮುಖಂಡ!...
ಪರಿಸರ ಪ್ರೇಮಿ ಸೋಗಿನಲ್ಲಿ ವನ್ಯಜೀವಿ ಮಂಡಳಿಯ ಮಾಜಿ ವಾರ್ಡನ್ ಕಾಡು ಪ್ರಾಣಿಗಳನ್ನು ಕೊಂದಿದ್ದಾರೆ. ಇವರು ಪ್ರಭಾವಿ ನಾಯಕನ ಶ್ರೀರಕ್ಷೆ ಬಲದಿಂದ ಕಾಡಿನಲ್ಲಿ ಬೇಟೆಯಾಡುತ್ತಿದ್ದರೆನ್ನಲಾಗಿದೆ.
ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್...
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ದಳ(NCB) ರಿಯಾ ಚಕ್ರವರ್ತಿ ವಿರುದ್ಧ ಕೇಸು ದಾಖಲಿಸಿದೆ. ಡ್ರಗ್ಸ್ ಡೀಲಿಂಗ್ ಮತ್ತು ಡ್ರಗ್ಸ್ ಬಳಸಿದ ಸಂಬಂಧ ಬುಧವಾರ ಸಂಜೆ ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಹಾಗೂ ಇತರ ಸ್ನೇಹಿತರ ವಿರುದ್ಧ ಎನ್‌ಸಿಬಿ ಕೇಸು ದಾಖಲಿಸಿದೆ.
ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!...
ಐ ಫೋನ್ ಅನ್ನು ಇಷ್ಟಪಡುವವರು ಹಲವರಿದ್ದಾರೆ. ಇನ್ನು ಬಳಸಿ ಇಷ್ಟಪಡದವರೂ ಇದ್ದಾರೆ. ಅದಿರಲಿ, ಈಗ ಇ-ಮಾರಾಟ ಕ್ಷೇತ್ರಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗಳಂತಹ ಸಂಸ್ಥೆಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆ್ಯಪಲ್ ಈಗ ತನ್ನದೇ ಆನ್‌ಲೈನ್ ಮಳಿಗೆಯನ್ನು ತೆರೆಯಲು ಹೊರಟಿದೆ. ಈ ಮೂಲಕ ಹೊಸ ಮುನ್ನುಡಿ ಬರೆಯಲು ಹೊರಟಿದೆ.
ಐದು ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನ; ಹೀಗಿದೆ ಇಂದಿನ ದರ!...
ಚಿನ್ನದ ದರ ನೋಡ ನೋಡುತ್ತಿದ್ದಂತೆಯೇ ಗಗನಕ್ಕೇರಿತ್ತು. ಇದು ಮದುವೆ ಕಾರ್ಯಗಳನ್ನಿಟ್ಟುಕೊಂಡವರಿಗೆ ಶಾಕ್ ಕೊಟ್ಟಿದ್ದರೆ, ಅನೇಕ ಮಂದಿ ಚಿನ್ನ ಖರೀದಿಸಲಾಗದೆ ಪರದಾಡಿದ್ದರು. ಆದರೀಗ ಕೊರೋನಾ ನಡುವೆಯೂ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದ್ದು, ನಿಂತ ನೀರಿನಂತಾಗಿದ್ದ ಉದ್ಯಮಗಳು ಮತ್ತೆ ಚೇತರಿಸಿಕೊಳ್ಳಲಾರಂಭಿಸಿವೆ. ಈ ನಡುವೆ ಚಿನ್ನದ ಬೆಲೆಯೂ ಇಳಿಯಲಾರಂಭಿಸಿದೆ.
ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾದ ಹೊಂಡಾ!...
ಹೊಂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಆರಂಭಿಕ ಹಂತದಲ್ಲಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುದಡೆ ಮಾಡಲು ತಯಾರಿ ಮಾಡಿಕೊಂಡಿದೆ. ಹ್ಯಾಚ್‌ಬ್ಯಾಕ್ ರೂಪದಲ್ಲಿ ನೂತನ ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಟೆಸ್ಲಾ ತಂತ್ಪಜ್ಞಾನ ಹಾಗೂ ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮುಂದಿನ ತಿಂಗಳು ನೂತನ ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ.
ಅಮೆರಿಕದಲ್ಲಿ ತಾಯಿ, ಪತ್ನಿಯನ್ನು ಕೊಂದ ಏಷ್ಯನ್ ಪದಕ ವಿಜೇತ..!...
ಕುವೈತ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕ ವಿಜೇತ ಇಕ್ಬಾಲ್ ಸಿಂಗ್ ಇದೀಗ ತಾಯಿ ಹಾಗೂ ಪತ್ನಿಯನ್ನು ಕೊಂದು ಸುದ್ದಿಯಾಗಿದ್ದಾರೆ.
ರಾಜ್ಯದಲ್ಲಿ ಕರೋನಾ ಸೋಂಕು 3 ಲಕ್ಷ, ಸಾವು 5 ಸಾವಿರ...
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಲೇ ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮೂರು ಲಕ್ಷ ತಲುಪಿದೆ.