News

ಹನಿಮೂನ್‌ನಲ್ಲಿ ಪತ್ನಿಯನ್ನು ಒಬ್ಬಳೇ ಬಿಟ್ಟ ಬೇರೆ ರೂಮ್‌ನಲ್ಲಿದ್ದ ರೆಹಮಾನ್‌

ಎಆರ್‌ ರೆಹಮಾನ್‌ ವಿಚ್ಛೇದನ

29 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಮತ್ತು ಅವರ ಪತ್ನಿ ಸಾಯಿರಾ ಬಾನು ಬೇರೆಯಾಗಲು ನಿರ್ಧರಿಸಿದ್ದಾರೆ. ಅವರು ವಿಚ್ಛೇದನವನ್ನು ಘೋಷಿಸಿದ್ದಾರೆ.

ಮಲಯಾಳಂ ನಟ ರಶೀನ್‌ ಹಾಗೂ ರೆಹಮಾನ್‌ ಸಂಬಂಧಿಗಳು

ಸೈರಾ ಬಾನು ಮಲಯಾಳಂ ನಟ ರಶೀನ್ ರೆಹಮಾನ್ ಅವರ ಪತ್ನಿ ಮೆಹರುನ್ನಿಸಾ ಅವರ ಸಹೋದರಿ. ರಶೀನ್ ಒಂದು ಸಂದರ್ಶನದಲ್ಲಿ ತಾನು ಎಆರ್‌ ರೆಹಮಾನ್‌ಗಿಂತ ಭಿನ್ನ ಹಾಗೂ ಹೆಚ್ಚು ಆಧ್ಯಾತ್ಮಿಕ ಎಂದಿದ್ದರು.

 

 

ಎಆರ್‌ ರೆಹಮಾನ್‌ ಹನಿಮೂನ್‌ ಕಥೆ

ಸಿದ್ಧಾರ್ಥ್ ಕಣ್ಣನ್ ಜೊತೆಗಿನ ಸಂದರ್ಶನದಲ್ಲಿ ರಶೀನ್ ರೆಹಮಾನ್ ಎ.ಆರ್‌. ರೆಹಮಾನ್ ಮತ್ತು ಸಾಯಿರಾ ಬಾನು ಅವರ ಹನಿಮೂನ್ ಕಥೆಯನ್ನು ಹೇಳಿದ್ದರು.

ಹಿಲ್‌ ಸ್ಟೇಷನ್‌ಗೆ ಹನಿಮೂನ್‌ಗೆ ಹೋಗಿದ್ದ ರೆಹಮಾನ್‌

ಎಆರ್‌ ರೆಹಮಾನ್‌ ಹಾಗೂ ಸಾಯಿರಾ ಮದುವೆಯಾದ ಬಳಿಕ, ಆಕೆಯನ್ನು ಹಿಲ್‌ ಸ್ಟೇಷನ್‌ಗೆ ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದರು ಅನ್ನೋದು ನೆನಪಿದೆ ಎಂದಿದ್ದರು.

ಗಂಡ ಎಲ್ಲಿದ್ದಾರೆ ಅನ್ನೋದು ಪತ್ನಿಗೇ ಗೊತ್ತಿರಲಿಲ್ಲ

ಬಹುಶಃ ರಾತ್ರಿ 12 ಅಥವಾ 1 ಗಂಟೆಗೆ ಸಾಯಿರಾಗೆ ನಾನು ಫೋನ್‌ ಮಾಡಿದ್ದಾಗ ಆಕೆ ನಿದ್ರೆ ಮಾಡ್ತಿದ್ದಳು. ರೆಹಮಾನ್‌ ಎಲ್ಲಿದ್ದಾರೆ ಎಂದು ಕೇಳಿದಾಗ, ಆಕೆ ಗೊತ್ತಿಲ್ಲ ಎಂದು ಹೇಳಿದ್ದಳು ಎಂದಿದ್ದಾರೆ.

 

ಬೇರೆ ಕೋಣೆಯಲ್ಲಿದ್ದ ರೆಹಮಾನ್‌

ರೆಹಮಾನ್‌ ಆಗೆ ಬೇರೆ ಕೋಣೆಯಲ್ಲಿ ಉಳಿದುಕೊಂಡು ವೀಣೆ ಅಭ್ಯಾಸ ಮಾಡುತ್ತಿದ್ದರು. ಅವರು ಏನೋ ಸಂಗೀತ ರಚನೆ ಮಾಡುತ್ತಿದ್ದರು ಎಂದು ರಶೀನ್‌ ಹೇಳಿದ್ದಾರೆ.

 

 

 

1995ರಲ್ಲಿ ರೆಹಮಾನ್‌-ಸಾಯಿರಾ ಮದುವೆ

ರೆಹಮಾನ್‌ ಮತ್ತು ಸಾಯಿರಾ ಬಾನು ಮದುವೆ 1995ರಲ್ಲಿ ನೆರವೇರಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರ ಹೆಸರುಗಳು ಖತೀಜಾ ರೆಹಮಾನ್‌, ರಹೀಮಾ ರೆಹಮಾನ್‌. ಎ. ಆರ್‌. ಆಮೀನ್ ಹೆಸರಿನ ಪುತ್ರನಿದ್ದಾರೆ.

ತಮ್ಮ ಗಂಡಂದಿರಿಗಿಂತಲೂ ಎತ್ತರವಾಗಿರುವ 7 ನಟಿಯರಿವರು

ಡಿಸೆಂಬರ್‌ ನಲ್ಲಿ ಮದುವೆಯಾಗಲಿರುವ ಕೀರ್ತಿ ಸುರೇಶ್ ಎಷ್ಟು ಕೋಟಿ ಆಸ್ತಿ ಒಡತಿ?

ತಮ್ಮ ಮನೆ ಬಾಡಿಗೆಗೆ ನೀಡಿದ ದೀಪಿಕಾ-ರಣವೀರ್, ತಿಂಗಳಿಗೆ ₹7 ಲಕ್ಷ ಆದಾಯ!

ಆಗ ಮಕ್ಕಳಾಗಿದ್ದ 'ಶಕ ಲಕ ಬೂಮ್ ಬೂಮ್' ತಾರೆಯರು ಈಗ ಹೇಗಿದ್ದಾರೆ ನೋಡಿ