Asianet Suvarna News Asianet Suvarna News

ಬಾಲಕಿ ನದಿ ದಾಟಿದರೂ ಒಂದ್ ಹನಿ ನೀರೂ ತಾಕಲಿಲ್ಲ; ವೈರಲ್ ಆಗಿದೆ ವಿಡಿಯೋ

viral video of man carrying girl in plastic bag to cross river

ಬೆಂಗಳೂರು: ಉತ್ತರ ವಿಯೆಟ್ನಾಂನ ಸ್ಯಾಮ್'​ಲ್ಯಾಂಗ್ ಎಂಬಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗಿ ಸ್ಯಾಮ್ ಲಾಂಗ್ ಗ್ರಾಮದಲ್ಲಿ ಇಡೀ ಸೇತುವೆ ಮುಳುಗಿ ಹೋಗಿತ್ತು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಜಲಾವೃತವಾಗಿತ್ತು. ಮಕ್ಕಳು ನಿತ್ಯ ಈ ಸೇತುವೆ ದಾಟಿಕೊಂಡು ಶಾಲೆಗೆ ಹೋಗಬೇಕಾಗಿತ್ತು. ಆದ್ರೆ, ಮಗಳಿಗೆ ಶಾಲೆ ತಪ್ಪಬಾರದು, ಆಕೆ ಹಾಕಿಕೊಂಡಿರೋ ಯುನಿಫಾರ್ಮ್‌ ಕೂಡ ಹಾಳಾಗಬಾರದು ಎಂದು ಮಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೂರಿಸಿ.. ಆ ಚೀಲಕ್ಕೆ ದಾರದಿಂದ ಕಟ್ಟಿ ಇಡೀ ನದಿಯಲ್ಲಿ ಈಜುತ್ತಾ ಸಾಗುತ್ತಾನೆ.. ಇಡೀ ನದಿ ದಾಟಿದ್ದರೂ ಆ ಬಾಲಕಿಗೆ ಒಂದೇ ಒಂದು ಹನಿ ನೀರು ಹತ್ತಿರಲಿಲ್ಲ.. ಯುನಿಫಾರ್ಮ್‌ ಕೂಡ ಒದ್ದೆಯಾಗಿರಲಿಲ್ಲ.. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- ಜೆ.ಎಸ್. ಪೂಜಾರ್, ಸುವರ್ಣನ್ಯೂಸ್

Follow Us:
Download App:
  • android
  • ios