ಸಕ್ರೆ ಕದ್ದು ಸಿಕ್ರೆ ಡೈಮಂಡ್ ಕದ್ರಾಯ್ತು: ಚತುರ ಇರುವೆಯ ವಿಡಿಯೋ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 1:03 PM IST
viral video of how an ant turns into a diamond stealer
Highlights

ಡೈಮಂಡ್ ಕದ್ದು ಸಿಕ್ಕಿ ಬಿದ್ದ ಕಳ್ಳ ಇರುವೆ! ಆಭರಣ ಮಳಿಗೆಯಲ್ಲಿ ಡೈಮಂಡ್ ಕದ್ದ ಇರುವೆ! ಡೈಮಂಡ್ ತುಣುಕನ್ನು ಹೊತ್ತೊಯ್ಯುತ್ತಿದ್ದ ಇರುವೆ

ನವದೆಹಲಿ(ಆ.9): ನೀವೆಲ್ಲಾ ಸಕ್ಕರೆ ಕದಿಯೋ ಇರುವೆ ನೋಡಿದ್ದೀರಿ. ಹಾಗಂತ ಇರುವೆಗಳು ಇನ್ನೂ ಸಕ್ಕರೆ ಕದಿಯೋದ್ರಲ್ಲೇ ತೃಪ್ತಿಯಾಗಿವೆ ಅಂತಾ ನೀವಂದುಕೊಂಡಿದ್ದರೆ ಹುಷಾರ್..ಈ ಜನರೇಶನ್ ಇರುವೆಗಳು ಡೈಮಂಡ್ ನ್ನೂ ಕದಿಯುತ್ತವೆ. 

ಹೌದು, ಆಭರಣ ಮಳಿಗೆ ಅಂಗಡಿಯೊಂದರಲ್ಲಿ ಪುಟಾಣಿ ಇರುವೆಯೊಂದು ಡೈಮಂಡ್ ಕದಿಯುವ ವೇಳೆ ಸಿಕ್ಕಿ ಬಿದ್ದಿದೆ. ಆಭರಣ ಮಳಿಗೆಯ ಸಿಬ್ಬಂದಿ ಗ್ರಾಹಕರಿಗೆ ಒಡವೆಗಳನ್ನು ಮಾರಾಟ ಮಾಡುವುದರಲ್ಲಿ ಬ್ಯೂಸಿಯಾಗಿದ್ದ ಸಂದರ್ಭದಲ್ಲಿ, ಈ ಕಳ್ಳ ಇರುವೆ ಡೈಮಂಡ್ ತುಣುಕೊಂದನ್ನು ಕದ್ದು ಹೊತ್ತೊಯ್ಯುತ್ತಿತ್ತು.

ಹಾಗಂತ ಡೈಮಂಡ್ ತುಣುಕು ಏನು ಮಹಾ ಅಂತಾ ಮೂಗು ಮುರಿಯಬೇಡಿ. ಈ ಇರುವೆ ಕದ್ದೊಯ್ಯುತ್ತಿದ್ದ ಡೈಮಂಡ್ ತುಣುಕಿನ ಬೆಲೆಯೇ ಲಕ್ಷಾಂತರ ರೂ. ಆಗುತ್ತದೆ. ಇರುವೆ ಎಳೆದೊಯ್ಯುತ್ತಿದ್ದ ಡೈಮಂಡ್ ತುಣುಕನ್ನು ಕೂಡಲೇ ವಶಕ್ಕೆ ಪಡೆದ ಸಿಬ್ಬಂದಿ, ಕಳ್ಳ ಇರುವೆಗೊಂದು ಸ್ವೀಟ್ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ ಎಂಬುದು ಸದ್ಯದ ಮಾಹಿತಿ. 

loader