ಹತ್ಯೆಗೀಡಾದ ಸೈನಿಕನ ಕೊನೆಯ ವಿಡಿಯೋ ವೈರಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jun 2018, 6:06 PM IST
Viral Video: Militants interrogating Soldier Aurangzeb
Highlights

  • ಉಗ್ರರಿಂದ ಹತ್ಯೆಯಾಗಿದ್ದ ಸೈನಿಕ ಔರಂಗಜೇಬ್
  • ಕಾಶ್ಮೀರದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಬೇಕಂತ!
  • ಚಿತ್ರಹಿಂಸೆ ನೀಡಿ ಯೋಧನನ್ನು ಹತ್ಯೆ ಮಾಡಿದ ಉಗ್ರರು


 

ಶ್ರೀನಗರ [ಜೂನ್ 16] : ಉಗ್ರರಿಂದ ಗುಂಡಿನ ಮಳೆ ತಿಂದು ಹತ್ಯೆಯಾಗಿದ್ದ ವೀರ ಯೋಧ ಔರಂಗಜೇಬ್ ಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಯೋಧನ ಅಪಹರಣ ಮಾಡಿದ ನಂತರ ಆತನನ್ನು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಶುಕ್ರವಾರದಿಂದಲೇ ವಿಡಿಯೋ ಜಾಲತಾಣದಲ್ಲಿದ್ದು ಇಂದು ವೈರಲ್ ಆಗಿದೆ.

ಈದ್​ ಹಬ್ಬದ ಆಚರಣೆಗಾಗಿ ರಜೆ ಪಡೆದು ಮನೆಗೆ ತೆರಳುತ್ತಿದ್ದ ಯೋಧನನ್ನು ಅಪಹರಿಸಿದ ಉಗ್ರರು ನಂತರ ಹತ್ಯೆ ಮಾಡಿದ್ದರು. ಪುಲ್ವಾನಾ ಜಿಲ್ಲೆಯ ಗುಸ್ಸೂ ಬಳಿ ಶವ ಪತ್ತೆಯಾಗಿತ್ತು.

ಭಾರತೀಯ ಯೋಧರು ಪಾಕ್ ಸಿಹಿ ನಿರಾಕರಿಸಿದ್ದು ಯಾಕೆ?

ಅಂತಿಮ ವಿಡಿಯೋದಲ್ಲಿ ಏನಿದೆ?: ಮಣ್ಣು ಮಣ್ಣಾದ ಬಟ್ಟೆಯಲ್ಲಿ ಯೋಧ ಔರಂಗಜೇಬ್ ಒಂದು ಕಡೆ ಕುಳಿತುಕೊಂಡಿದ್ದಾರೆ. ಉಗ್ರನೊಬ್ಬ ಅವರಿಗೆ ಪ್ರಶ್ನೆ ಮಾಡುತ್ತಿದ್ದು ಒಂದಾದ ಮೇಲೆ ಒಂದು ಉತ್ತರ ಪಡೆದುಕೊಳ್ಳುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಿಂದ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರಕಾರ ತೀರ್ಮಾನಿಸಬೇಕು ಎಂದು ಒತ್ತಾಯ ಮಾಡುತ್ತಾನೆ. ಫೇಸ್ ಬುಕ್ ನಲ್ಲಿ 47 ಸಾವಿರಕ್ಕೂ ಅಧಿಕ ಜನರಿಂದ ವೀಕ್ಷಣೆಗೆ ಒಳಗಾಗಿದೆ.

 

 

loader