ಲಕ್ನೋ[ಸೆ.19]: ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶದ ಪುಟಾಣಿಗಳ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಫುಲ್ ಜೋಷಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ನೋಡಬಹುದು. ಸದ್ಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಹೀಗಿದ್ದರೂ ದೇಶದಲ್ಲಿ ವಿದ್ಯಾರ್ಥಿಗಳು ಸೌಕರ್ಯಗಳಿಂದ ವಂಚಿತರಾಗುವ ಸತ್ಯವೂ ಅನಾವರಣಗೊಂಡಿದೆ. 

ವಾಸ್ತವವಾಗಿ 'ಹೈ ಜೋಷ್'ನಲ್ಲಿ ಪಿಟಿ ಮಾಡುತ್ತಿರುವ ಪುಟ್ಟ ಪುಟಾಣಿಗಳ ಕಾಲಲ್ಲಿ ಶೂಗಳಿಲ್ಲ, ಸಮವಸ್ತ್ರವೂ ಇಲ್ಲ. ಹೀಗಿದ್ದರೂ ಮಕ್ಕಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಿಸ್ತಿನ ಸಿಪಾಯಿಗಳಂತೆ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಖುಷಿ ಕೊಡುತ್ತೆ.

ಸುಮಿತ್ ಸರ್ ಪಂಚ್ ಮಕ್ಡೌಲಿ ಎಂಬಾತ ಈ ವಿಡಿಯೋವನ್ನು ಶೇರ್ ಮಾಡುತ್ತಾ 'ನಿಮಗೆಲ್ಲರಿಗೂ ಜನವರಿ/ಫೆಬ್ರವರಿ, ವರಗಳ ಹೆಸರು ಸೇರಿದಂತೆ ಇನ್ನಿತರ ವಿಚಾರಗಳನ್ನರಿಯದ ಉತ್ತರ ಪ್ರದೇಶದ ಶಿಕ್ಷಕರ ವಿಡಿಯೋ ವೈರಲ್ ಆಗಿದ್ದು ನೆನಪಿರಬಹುದು. ಆದರೀಗ ಅದೇ ಉತ್ತರ ಪ್ರದೆಶದ ಹಾರ್ದೋಯಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಮೇಶ್ ಕುಮಾರ್ ನೀಡಿರುವ ತರಬೇತಿ ವಿಡಿಯೋ ನೋಡಿ' ಎಂದು ಬರೆದಿದ್ದಾರೆ.