ಬೆಂಗಳೂರಲ್ಲಿ ಲೈಂಗಿಕ ಕಿರುಕುಳ : ಮಹಿಳೆ ಅಳುವ ವಿಡಿಯೋ ವೈರಲ್ [ವೈರಲ್ ಚೆಕ್]

First Published 10, May 2018, 12:04 PM IST
viral Check Women complain About Sexual Harassment
Highlights

ಬೆಂಗಳೂರಿನಲ್ಲಿ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷಿಸಿದ್ದಾರೆಂದು ಮಹಿಳೆಯೊಬ್ಬರು ಅಳಲನ್ನು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಬೆಂಗಳೂರು : ಬೆಂಗಳೂರಿನಲ್ಲಿ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷಿಸಿದ್ದಾರೆಂದು ಮಹಿಳೆಯೊಬ್ಬರು ಅಳಲನ್ನು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ವಿಡಿಯೋದ ಕೆಳಗೆ ‘ಇಂತಹ ಕರುಣಾಜನಕ ಕತೆ ಬೆಂಗಳೂರಿನಲ್ಲಿ ನಡೆದಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ? ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಪೊಲೀಸರು ರಕ್ಷಣೆ ಒದಗಿಸುವುದು ಯಾವಾಗ? ಈ ಸಂದೇಶವನ್ನು ದೇಶದ ಪ್ರತಿಯೊಬ್ಬರಿಗೂ ಕಳುಹಿಸಿ’ ಎಂದು ಒಕ್ಕಣೆಯನ್ನೂ ಬರೆಯಲಾ ಗಿದೆ. ಈ ವಿಡಿಯೋ ಫೇಸ್‌ಬುಕ್ ವಾಟ್ಸ್‌ಆ್ಯಪ್ ಮತ್ತು ಟ್ವೀಟರ್‌ನಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಬೆಂಗಳೂರಿನಲ್ಲಿ ಇಂಥದ್ದೊಂದು ಘಟನೆ ನಡೆದಿತ್ತೇ ಎಂದು ‘ಆಲ್ಟ್‌ನ್ಯೂಸ್’ ಪರಿಶೀಲಿಸಿದಾಗ ಇದು ಬೆಂಗಳೂರಿನಲ್ಲಿ ನಡೆದ ಘಟನೆಯೇ ಅಲ್ಲ, ಇದು ಮಲೇಷ್ಯಾದಲ್ಲಿ ನಡೆದ ಘಟನೆಯ ವಿಡಿಯೋ ಎಂಬುದು ಸಾಬೀತಾಗಿದೆ.

 ಈ ವಿಡಿಯೋದಲ್ಲಿರುವ ಮಹಿಳೆಯ ಹೆಸರು ಕೋಗಿ ಸಿನ್ನಿಯಾ. ಸಿನ್ನಿಯಾ ರಾತ್ರಿ 10 ಗಂಟೆ ವೇಳೆ ಟ್ರೈನಿಂಗ್‌ವೊಂದರಿಂದ ಮಗನೊಂದಿಗೆ ಬರುವ ವೇಳೆ ಬಿಎಂಡಬ್ಲ್ಯೂ ಕಾರಿನಲ್ಲಿ ಬಂದ ನಾಲ್ವರು ದುರ್ಷರ್ಮಿಗಳು ಆಕೆ ಕಾರನ್ನು ಹಿಂಬಾಲಿಸಿ, ಕಾರನ್ನು ಅಡ್ಡಗಟ್ಟುತ್ತಾರೆ. ಪೊಲೀಸ್ ಠಾಣೆ ಸಮೀಪವಿದ್ದು ಹಾರ್ನ್ ಮಾಡಿದರೂ ಯಾರೂ ನೆರವಿಗೆ ಬಂದಿರಲಿಲ್ಲ. 

ಬಳಿಕ ಪೊಲೀಸರ ಬಳಿಯೇ ಹೋದರೂ  ಸ್ಪಂದಿಸಿರಲಿಲ್ಲ. ಹೀಗಾಗಿ ತಮ್ಮ ಅಳಲನ್ನು ತೋಡಿಕೊಂಡು ಮಾರ್ಚ್ 18ರಂದು ಮಹಿಳೆ ವಿಡಿಯೋ ಮಾಡಿದ್ದರು. ಅಲ್ಲದೆ ವಿಡಿಯೋದಲ್ಲಿ ಆಕೆ ಉಲ್ಲೇಖಿಸುವ ಕಾರಿನ ಸಂಖ್ಯೆ ‘ಬಿಎಂಡಬ್ಲ್ಯೂ 618’ ಹಾಗೂ ಪೊಲೀಸರಿಗೆ ಕರೆ ಮಾಡಿದೆ ಎಂದು ಹೇಳುವ ಸಂಖ್ಯೆ ‘999’ ಆಗಿದೆ. ಈ ಸಂಖ್ಯೆಗಳೆರಡು ಈ ವಿಡಿಯೋ ಕರ್ನಾಟಕದ್ದೂ ಅಲ್ಲ, ಭಾರತದ್ದೇ ಅಲ್ಲ ಎಂದು ಸ್ಪಷ್ಟಪಡಿಸುತ್ತವೆ.

 

loader