ಬುರ್ಖಾ ಧರಿಸಲು ಒಪ್ಪದ ಮಹಿಳೆಯ ಜಡೆಗೇ ಕತ್ತರಿ..?

Viral Check Woman’s hair chopped off for not wearing burkha
Highlights

ಬುರ್ಖಾ ಧರಿಸಲು ಒಪ್ಪದ ಕಾರಣ ಮಹಿಳೆಯೊಬ್ಬರ ಜಡೆಯನ್ನೇ ಕತ್ತರಿಸಿದ್ದಾರೆ ಎಂಬ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಚೆಕ್

ಬುರ್ಖಾ ಧರಿಸಲು ಒಪ್ಪದ ಕಾರಣ ಮಹಿಳೆಯೊಬ್ಬರ ಜಡೆಯನ್ನೇ ಕತ್ತರಿಸಿದ್ದಾರೆ ಎಂಬ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ವೈರಲ್‌ ಆಗಿರುವ ಸಂದೇಶದಲ್ಲಿ, ಬುರ್ಖಾ ಧರಿದ ಕಾರಣ ಮಹಿಳೆಯೊಬ್ಬರ ಕೂದಲನ್ನು ಮಗಳ ಸಮ್ಮುಖದಲ್ಲಿಯೇ ಕತ್ತರಿಸಲಾಗಿದೆ.

ಮುಜಾಹಿದ್ದೀನ್‌ಗಳು ಭೂಮಿಯ ಮೇಲಿರುವ ಅತ್ಯಂತ ಹೇಡಿಗಳು. ಅವರು ಮಾತ್ರ ಅಸಹಾಯಕ ಮನುಷ್ಯರಿಗೆ ಚಿತ್ರಹಿಂಸೆ ನೀಡಲು ಸಾಧ್ಯ ಎಂಬ ಒಕ್ಕಣೆಯನ್ನು ಬರೆದು ಜೂನ್‌ 26ರಂದು ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಟ್ವೀಟನ್ನು 1800 ಬಾರಿ ರೀಟ್ವೀಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ಧ್ವನಿಯು ಅಸ್ಪಷ್ಟವಾಗಿದೆ.

ಆದರೆ ನಿಜಕ್ಕೂ ಬುರ್ಖಾ ಧರಿಸಲು ಒಪ್ಪದ ಕಾರಣಕ್ಕಾಗಿ ಮಹಿಳೆಯೊಬ್ಬರ ಜಡೆಯನ್ನು ಕತ್ತರಿಸಲಾಗಿತ್ತೇ ಎಂದು ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ ಈ ವಿಡಿಯೋ ಹಿಂದಿನ ವಾಸ್ತಕ ಕತೆ ಬಯಲಾಗಿದೆ. ಆಲ್ಟ್‌ ನ್ಯೂಸ್‌ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಈ ಕುರಿತ ವಿಡಿಯೋ ಹುಡುಕಹೊರಟಾಗ ಪತಿಯೇ ಪತ್ನಿಯ ಜಡೆಕತ್ತರಿಸಿದ್ದಾಗಿ ಲೇಖನವೊಂದರಲ್ಲಿ ವರದಿಯಾಗಿದೆ.

ಲೇಖನದಲ್ಲಿ ಪತಿ ತನ್ನ ಪತ್ನಿಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಸೇಡು ತೀರಿಸಿಕೊಳ್ಳಲು ಜಡೆ ಕತ್ತರಿಸಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಈ ಘಟನೆ ಬ್ರೆಜಿಲ್‌ನ ಗ್ವಾರಂಪ್ವಾರದಲ್ಲಿ ನಡೆದಿದೆ ಎಂದು ಹೇಳಿಲಾಗಿದೆ. ಈ ವಿಡಿಯೋ 2017ರಲ್ಲೇ ಅಪ್‌ಲೋಡ್‌ ಆಗಿದ್ದು, ಇದುವರೆಗೆ 50 ಸಾವಿರ ಜನರು ವೀಕ್ಷಿಸಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿರುವಂತೆ ಬುರ್ಖಾ ಧರಿಸದ ಕಾರಣ ಮಹಿಳೆಯ ಜಡೆ ಕತ್ತರಿಸಿದ್ದಲ್ಲ. ಪತಿ ತನ್ನ ಪತ್ನಿ ಮೋಸ ಮಾಡಿದ್ದಾಳೆಂದು ಆರೋಪಿಸಿ ಜಡೆ ಕತ್ತರಿಸಿದ ವಿಡಿಯೋ ಇದಾಗಿದೆ.

 

loader