ಗುಜರಾತ್ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಚುನಾವಣಾ ಪ್ರಚಾರಕ್ಕೆ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಚಾಲನೆ ನೀಡಿವೆ. ಈ ಮಧ್ಯೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತಿನ ಗಾಂಧೀನಗರದಲ್ಲಿ ಅ.23ರಂದು ಸಾರ್ವಜನಿಕ ರ್ಯಾಲಿಯೊಂದರಲ್ಲಿ ಭಾಗಿಯಾಗಿದ್ದರು.

ಗುಜರಾತ್ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಚುನಾವಣಾ ಪ್ರಚಾರಕ್ಕೆ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಚಾಲನೆ ನೀಡಿವೆ. ಈ ಮಧ್ಯೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತಿನ ಗಾಂಧೀನಗರದಲ್ಲಿ ಅ.23ರಂದು ಸಾರ್ವಜನಿಕ ರ್ಯಾಲಿಯೊಂದರಲ್ಲಿ ಭಾಗಿಯಾಗಿದ್ದರು.

ಈ ರ್ಯಾಲಿಗೆ ಭಾರೀ ಪ್ರಮಾಣದ ಜನ ಸಮೂಹ ನೆರೆದಿತ್ತು. ಆದರೆ ಈ ಕಾರ್ಯಕ್ರಮ ಮಾರನೇ ದಿನವೇ ರಾಹುಲ್ ರ್ಯಾಲಿ ಹೆಸರಲ್ಲಿ ವಿಡಿಯೋವೊಂದು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.ಅದರಲ್ಲಿ ಗುಜರಾತಿನಲ್ಲಿ ರಾಹುಲ್ ರ್ಯಾಲಿಗೆ ಯಾವತ್ತೂ ಇಷ್ಟೊಂದು ಪ್ರಮಾಣದ ಜನರು ಸೇರಿರಲಿಲ್ಲ. ಈ ರ್ಯಾಲಿಗೆ ಹಣಕೊಟ್ಟು ಜನರನ್ನು ಕರೆಸಲಾಗಿತ್ತು ಎಂಬ ಆರೋಪವನ್ನೂ ಮಾಡಲಾಗಿದೆ. 

ಈ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಸಮಾರಂಭಕ್ಕೆ ಆಗಮಿಸುವ ಜನರಿಗೆ ವ್ಯಕ್ತಿಯೊಬ್ಬ ಹಣ ಹಂಚುತ್ತಿರುವುದನ್ನು ನೋಡಬಹುದು. ಹಣ ಪಡೆದ ಜನರು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕುತ್ತಾ ರ್ಯಾಲಿಗೆ ತೆರಳುತ್ತಿದ್ದಾರೆ. ವಯಸ್ಕರು, ಮಹಿಳೆಯರು ಮಾತ್ರವಲ್ಲ, ರ್ಯಾಲಿಗೆ ಆಗಮಿಸಿದ ಮಕ್ಕಳಿಗೂ ಹಣ ಹಂಚಲಾಗಿದೆ.

ಗಾಂಧೀ ನಗರದ ಮೈದಾನದಲ್ಲಿ ರ್ಯಾಲಿಗೆ ಜನರನ್ನು ಕರೆತರಲು ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದೆ. ಹೀಗಾಗಿ ಮೈದಾನ ಜನರಿಂದ ಭರ್ತಿಯಾಗಿತ್ತು ಎಂದು ಆರೋಪಿಸಲಾಗಿದೆ.

ಆದರೆ, ವೈರಲ್ ಆಗಿರುವ ವಿಡಿಯೋ ವಾಸ್ತವವಾಗಿ ರಾಹುಲ್ ಗಾಂಧಿ ಪಾಲ್ಗೊಂಡ ಸಮಾವೇಶದ್ದಲ್ಲ. ಬದಲಾಗಿ ಇದು ಮಣಿಪುರದ ವಿಡಿಯೋ ಎಂದು ಗೊತ್ತಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಮಹಿಳೆಯೊಬ್ಬಳು ಹಿಡಿದ ಫಲಕದಲ್ಲಿ ವಾರ್ಡ್ ನಂ.5 ಕೆ.ಎಂ.ಸಿ. ಎಂದು ಬರೆಯಲಾಗಿದೆ. ಮಣಿಪುರದಲ್ಲಿ ಕಾಕ್‌ಚಿಂಗ್ ವಿಧಾನಸಭಾ ಕ್ಷೇತ್ರ ಇದ್ದು, ಕಾಕ್‌ಚಿಂಗ್ ಮುನ್ಸಿಪಲ್ ಕೌನ್ಸಿಲ್ ಅನ್ನು ಕೆ. ಎಂ.ಸಿ ಎಂದು ಕರೆಯಲಾಗುತ್ತದೆ. ಹೀಗಾಗಿ ರಾಹುಲ್ ಗಾಂಧಿ ಗುಜರಾತ್ ರ್ಯಾಲಿಗೆ ಹಣಕೊಟ್ಟು ಜನರನ್ನು ಕರೆತಂದಿದ್ದರು ಎಂಬ ವೈರಲ್ ಸುದ್ದಿ ಸುಳ್ಳು