ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಭಾವಿ ವ್ಯಕ್ತಿ ಎಂಬುದು ಹಲವು ಸಮೀಕ್ಷೆಗಳಲ್ಲಿ ಬಯಲಾಗಿದೆ. ಆದರೆ ಇದೀಗ ಮೋದಿ ಜಗತ್ತಿನಲ್ಲಿಯೇ ಅತೀ ಪ್ರಭಾವಿ ವ್ಯಕ್ತಿ ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿಯಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಭಾವಿ ವ್ಯಕ್ತಿ ಎಂಬುದು ಹಲವು ಸಮೀಕ್ಷೆಗಳಲ್ಲಿ ಬಯಲಾಗಿದೆ. ಆದರೆ ಇದೀಗ ಮೋದಿ ಜಗತ್ತಿನಲ್ಲಿಯೇ ಅತೀ ಪ್ರಭಾವಿ ವ್ಯಕ್ತಿ ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿಯಾಗುತ್ತಿದೆ.

ಟರ್ಕಿ ದೇಶದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ನಾಯಕ ಎಂಬ ಗೌರವ ನೀಡಿ ಮೋದಿ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ಭಾರತವೇ ಹೆಮ್ಮೆ ಪಡುವ ವಿಚಾರ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಗಾದರೆ ಟರ್ಕಿ ದೇಶದಲ್ಲಿ ನಿಜವಾಗಿಯೂ ನರೇಂದ್ರ ಮೋದಿಯ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತರಲಾಗಿದೆಯೇ ಎಂದು ಹುಡುಕ ಹೊರಟಾಗ ಸಿಕ್ಕ ಉತ್ತರ ಬೇರೆ. ಇಲ್ಲಿ ಮೋದಿ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆಗೊಳಿಸಲಾಗಿದೆ ಆದರೆ ಈ ಅಂಚೆ ಚೀಟಿಯನ್ನು ಹೊರತಂದಿದ್ದು ಈಗಲ್ಲ, ಬದಲಾಗಿ 2015ರ ಜಿ20 ಶೃಂಗ ಸಭೆಯಲ್ಲಿ. ಅಲ್ಲದೆ ಮೋದಿ ಪ್ರಭಾವಿ ವ್ಯಕ್ತಿ ಎಂದು ಈ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದಲ್ಲ. ಬದಲಾಗಿ ಜಿ20 ಸಮಾವೇಶಲ್ಲಿ ಪಾಲ್ಗೊಳ್ಳುವ ಜಗತ್ತಿನ 33 ಜನಪ್ರಿಯ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಜಗತ್ತಿನ 33 ಜನಪ್ರಿಯ ನಾಯಕರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು.

ಆ 33 ಜನರಲ್ಲಿ ಮೋದಿಯೂ ಒಬ್ಬರಷ್ಟೇ. ಹೀಗಾಗಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ವ್ಯಕ್ತಿ ಎಂದು ಟರ್ಕಿ ದೇಶದಲ್ಲಿ ಅವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತಲಾಗಿದೆ ಎಂಬ ಸುದ್ದಿ ಸುಳ್ಳು.