ಇತ್ತೀಚೆಗೆ ನೋಟ್ ಬ್ಯಾನ್ ಆದ ನಂತರದಲ್ಲಿ 2 ಕೋಟಿ ರು. ಮೌಲ್ಯದ 2000 ರು. ನಕಲಿ ನೋಟುಗಳು ಭಾರತಕ್ಕೆ ನುಸುಳಿವೆ. ಹೀಗಾಗಿ ಯಾರೂ ಕೂಡಾ 2AQ,ಮತ್ತು 8AC ಸೀರಿಸ್ ಇರುವ 2000 ರು. ನೋಟುಗಳನ್ನು ಸ್ವೀಕರಿಸಬಾರದೆಂದು ಆರ್‌ಬಿಐ ಸುತ್ತೋಲೆ ಹೊರಡಿಸಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಮೆಸೇಜ್‌ನ್ನು ಶೇರ್ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿ ಎಂದೂ ಸಹ ಹೇಳಲಾಗಿದೆ.
ಇತ್ತೀಚೆಗೆ ನೋಟ್ ಬ್ಯಾನ್ ಆದ ನಂತರದಲ್ಲಿ 2 ಕೋಟಿ ರು. ಮೌಲ್ಯದ 2000 ರು. ನಕಲಿ ನೋಟುಗಳು ಭಾರತಕ್ಕೆ ನುಸುಳಿವೆ. ಹೀಗಾಗಿ ಯಾರೂ ಕೂಡಾ 2AQ,ಮತ್ತು 8AC ಸೀರಿಸ್ ಇರುವ 2000 ರು. ನೋಟುಗಳನ್ನು ಸ್ವೀಕರಿಸಬಾರದೆಂದು ಆರ್ಬಿಐ ಸುತ್ತೋಲೆ ಹೊರಡಿಸಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಮೆಸೇಜ್ನ್ನು ಶೇರ್ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿ ಎಂದೂ ಸಹ ಹೇಳಲಾಗಿದೆ.
ಆದರೆ ಆರ್ಬಿಐ ನಿಜವಾಗಿಯೂ ಇಂಥದ್ದೊಂದು ಆದೇಶವನ್ನು ನೀಡಿತ್ತೇ? ಎಂದು ಇದರ ಸತ್ಯಾಸತ್ಯತೆಯನ್ನು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆ. ಇತ್ತೀಚೆಗೆ 2000ರು. ಬಿಡುಗಡೆಯಾದ ನಂತರ ಆರ್ಬಿಐ ಈ ರೀತಿ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ. ಬದಲಾಗಿ 2009ರಲ್ಲಿ ಕೇಂದ್ರೀಯ ಬ್ಯಾಂಕ್ 1000ರು. ಮುಖಬೆಲೆಯ 2AO ಮತ್ತು 8AC ಸೀರೀಸ್ನ ನಕಲಿ ನೋಟುಗಳು ಭಾರತಕ್ಕೆ ಲಗ್ಗೆ ಇಟ್ಟಿವೆ. ಭಯೋತ್ಪಾದನ ನಿಗ್ರಹ ದಳವು ಇಂತಹ 345 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದೆ. ಹಾಗಾಗಿ ಬ್ಯಾಂಕುಗಳು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿತ್ತು.ಅಲ್ಲದೆ ಈ ಸುತ್ತೋಲೆಯು ಆರ್ಬಿಐನ ಅಂದಿನ ಗವರ್ನರ್ ವೈ.ವಿ ರೆಡ್ಡಿ ಅವರ ಸಹಿಯನ್ನು ಹೊಂದಿದೆ.
ಈ ಸಂದೇಶವನ್ನೇ 2000 ರು. ನೋಟುಗಳೆಂದು ಪರಿವರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಹೀಗಾಗಿ ಭಾರತದಲ್ಲಿ ನಕಲಿ ನೋಟುಗಳು ಲಗ್ಗೆ ಇಟ್ಟಿರುವುದರಿಂದ 2AQ,ಮತ್ತು 8AC ಇರುವ ಸೀರಿಸ್ 2000 ರು. ನೋಟುಗಳನ್ನು ಸ್ವೀಕರಿಸಬಾರದು ಎಂದು ಆರ್ಬಿಐ ಹೇಳಿರುವುದು ಸುಳ್ಳು ಎಂಬಂತಾಯಿತು.
![[ವೈರಲ್ ಚೆಕ್] 2000 ರು. ಮುಖಬೆಲೆಯ ನೋಟು ಸ್ವೀಕರಿಸದಂತೆ ಆರ್ಬಿಐನಿಂದ ಸುತ್ತೋಲೆ! [ವೈರಲ್ ಚೆಕ್] 2000 ರು. ಮುಖಬೆಲೆಯ ನೋಟು ಸ್ವೀಕರಿಸದಂತೆ ಆರ್ಬಿಐನಿಂದ ಸುತ್ತೋಲೆ!](https://static.asianetnews.com/images/w-1280,h-720,imgid-d39f09a2-f17d-43f6-be4e-1ed0800f71c3,imgname-image.jpg)