ವಡೋದರಾದಲ್ಲಿದೆ ಮಲಗಿಕೊಂಡು ಸಿನಿಮಾ ನೋಡುವ ಥಿಯೇಟರ್!

news | Monday, June 11th, 2018
Suvarna Web Desk
Highlights

ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಗುಜರಾತಿನ ವಡೋದರಾದಲ್ಲಿ ದೇಶದ ಅತಿದೊಡ್ಡ ಸಿನಿಮಾ ಮಂದಿರ ನಿರ್ಮಾಣವಾಗಿದೆಯೇ ಎಂದು ‘ಬೂಮ್ ಲೈವ್’ ಹುಡುಕ ಹೊರಟಾಗ ಈ ಸಂದೇಶದ
ಹಿಂದಿನ ಅಸಲಿ ಕತೆ ಬಯಲಗಿದೆ.

ಭಾರತದ ಅತಿದೊಡ್ಡ ಸಿನಿಮಾ ಥಿಯೇಟರ್ ವೊಂದು ಗುಜರಾತಿನ ವಡೋದರಾದಲ್ಲಿ ನಿರ್ಮಾಣವಾಗಿದ್ದು, ಇದೇ ಜೂನ್ 26ರಂದು ಅದರ ಉದ್ಘಾಟನೆ ನಡೆಯಲಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹಾಗೇ ಈ ಸಿನಿಮಾ ಮಂದಿರಕ್ಕೆ ಹೋಗಬೇಕೆನ್ನುವವರು 800 ರು. ಪಾವತಿಸಬೇಕೆಂದೂ ಹೇಳಲಾಗಿದೆ. ಈ ಸಂದೇಶದೊಂದಿಗೆ ಅತಿದೊಡ್ಡ ರಿಲಯನ್ಸ್ ಸಿನಿಮಾ ಮಾಲ್‌ನ ಪೋಟೋವೊಂದನ್ನು ಪ್ರಕಟಿಸಲಾಗಿದೆ. ಸಾಕಷ್ಟು ಜನ ಈ ಸಂದೇಶವನ್ನು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್ ಗಳಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾ ಮಂದಿರದ ವಿಶೇಷ ಎಂದರೆ ಇದರೊಳಗೆ ಮಲಗಿಕೊಂಡು ಸಿನಿಮಾ ನೋಡಬಹುದು ಎನ್ನಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಗುಜರಾತಿನ ವಡೋದರಾದಲ್ಲಿ ದೇಶದ ಅತಿದೊಡ್ಡ ಸಿನಿಮಾ ಮಂದಿರ ನಿರ್ಮಾಣವಾಗಿದೆಯೇ ಎಂದು ‘ಬೂಮ್ ಲೈವ್’ ಹುಡುಕ ಹೊರಟಾಗ ಈ ಸಂದೇಶದ
ಹಿಂದಿನ ಅಸಲಿ ಕತೆ ಬಯಲಗಿದೆ.

ಬೂಮ್ ಲೈವ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳನ್ನೇ ಹುಡುಕಿ ಪರಿಶೀಲಿಸಿದ್ದು, ಈ ವೇಳೆ ಸಿಕ್ಕ ಚಿತ್ರವೊಂದರಲ್ಲಿರುವ ದಿಂಬುಗಳ ಮೇಲೆ ‘ಬುದಾ ಬೆಡ್ ಸಿನಿಮಾ’ ಎಂಬ ಹೆಸರಿರುವುದು ಪತ್ತೆಯಾಗಿದೆ. ಇದೇ ಜಾಡನ್ನು ಹಿಡಿದು ಹುಡುಕ ಹೊರಟಾಗ ಈ ರೀತಿಯ ಸಿನಿಮಾ ಮಂದಿರವಿರುವುದು ಭಾರತದಲ್ಲಲ್ಲ, ಬದಲಾಗಿ ಹಂಗೇರಿಯಾದಲ್ಲಿ ಎಂಬುದು ಸಾಬೀತಾಗಿದೆ. ಅಲ್ಲದೆ ಈ ಕುರಿತ ಲೇಖನ ಕೂಡ ದೊರಕಿದ್ದು, ಅದರಲ್ಲಿ 2014 ನವೆಂಬರ್‌ನಲ್ಲಿ ಹಂಗೇರಿಯಾದಲ್ಲಿ ಈ ರೀತಿಯ ಸಿನಿಮಾ ಮಂದಿರವೊಂದು ನಿರ್ಮಾಣವಾಗಿದೆ ಎಂದಿದೆ.

ಕೇಂದ್ರ ಯುರೋಪಿನಲ್ಲಿಯೇ ಇದು ಪ್ರಥಮ ಸ್ಪ್ರಿಂಗ್‌ಬೆಡ್ ಸಿನಿಮಾ ಥಿಯೇಟರ್. ವಡೋದರಾದಲ್ಲಿ ರಿಲಯನ್ಸ್ ಮಾಲ್ ಇರುವುದು ಸತ್ಯ ಆದರೆ ಈ ರೀತಿಯ ಅತ್ಯಾಧುನಿಕ ಸಿನಿಮಾ ಮಂದಿರ ಇಲ್ಲ.

Comments 0
Add Comment

  Related Posts

  Suresh Gowda Reaction about Viral Video

  video | Friday, April 13th, 2018

  BJP MLA Video Viral

  video | Friday, April 13th, 2018

  MLA Impolite Conversation Viral

  video | Sunday, April 8th, 2018

  UP Viral Video

  video | Friday, March 30th, 2018

  Suresh Gowda Reaction about Viral Video

  video | Friday, April 13th, 2018
  K Chethan Kumar