ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಾರೂ ಕಂಡುಕೇಳರಿಯದ ಭೂಕಂಪನ ಸಂಭವಿಸುತ್ತದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಊಹಿಸಿದೆ ಎನ್ನುವಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನವದೆಹಲಿ (ಮಾ.23): ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಾರೂ ಕಂಡುಕೇಳರಿಯದ ಭೂಕಂಪನ ಸಂಭವಿಸುತ್ತದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಊಹಿಸಿದೆ ಎನ್ನುವಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆ ಸಂದೇಶದಲ್ಲಿ ‘ಅತಿ ಶೀಘ್ರದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಭಯಂಕರವಾದ ಭೂಕಂಪನ ಸಂಭವಿಸಲಿದೆ. ರಿಕ್ಟರ್‌ ಮಾಪಕದಲ್ಲಿ 9.1 ರಷ್ಟುತೀವ್ರತೆಯ ಭೂಕಂಪನ ಸಂಭವಿಸಲಿದೆ. ದಿನಾಂಕ ಸ್ಪಷ್ಟವಾಗಿಲ್ಲ. ಆದರೆ ಏ.7ರಿಂದ 15ರ ಒಳಗೆ ಸಂಭವಿಸಲಿದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ’ ಎಂದು ಹೇಳಲಾಗಿದೆ. ಅಲ್ಲದೆ ಇತಿಹಾಸದಲ್ಲಿಯೇ ಎರಡನೇ ಬಾರಿಗೆ ಭಾರಿ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸಲಿದೆ. ನಿಮ್ಮ ಸಂಬಂಧಿಕರು, ಸ್ನೇಹಿತರು ಯಾರಾದರೂ ದೆಹಲಿಯಲ್ಲಿ ವಾಸವಿದ್ದರೆ ಕೂಡಲೇ ಈ ಸಂದೇಶ ತಲುಪಿಸಿ. ದೆಹಲಿ ಸರ್ಕಾರವು ಕೂಡ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ಭೂಕಂಪನ ತೀವ್ರತೆ ಹೆಚ್ಚಿರುವುದರಿಂದ ಕೇವಲ ದೆಹಲಿ ಮಾತ್ರವಲ್ಲದೆ, ನೆರೆಯ ಹರಿಯಾಣ, ಪಂಜಾಬ್‌, ಜಮ್ಮು-ಕಾಶ್ಮೀರ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯಗಳಲ್ಲೂ ಭೂಕಂಪನದ ತೀವ್ರತೆ ವಿಸ್ತರಿಸಬಹುದು. 

ಈ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನ ಸಂಭವಿಸುವುದು ನಿಜವೇ ಎಂದು ಹುಡುಕಹೊರಟಾಗ ಇದೊಂದು ವಂದಂತಿ ಎಂದು ಸ್ಪಷ್ಟವಾಗಿದೆ. ವಾಸ್ತವವಾಗಿ ಪ್ರಕೃತಿ ವಿಕೋಪ, ಭೂಕಂಪನವನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ನೀಡಿರುವ ವೆಬ್‌ಸೈಟ್‌ ಬಾಹ್ಯಾಕಾಶ ಸಂಸ್ಥೆ ನಾಸಾದ ಅಧಿಕೃತ ವೆಬ್‌ಸೈಟ್‌ ಅಲ್ಲ. ನಾಸಾ ಈ ಕುರಿತ ಯಾವುದೇ ಮಾಹಿತಿಯನ್ನೂ ಬಿಡುಗಡೆ ಮಾಡಿಲ್ಲ.