ಬಿಜೆಪಿ ಮಾಧ್ಯಮ ಸಂಚಾಲಕ ವಿನಯ್​ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿ.ಎಸ್ ಯಡಿಯೂರಪ್ಪಗೆ ವಿನಯ್​ ಪತ್ನಿ ಶೋಭಾ ಪತ್ರ  ಬರೆದಿದ್ದಾರೆ.  ನಮ್ಮ ಮನೆಗೆ ಬಂದು ತಿಂಡಿ ಮಾಡಿಕೊಡಿ ಎಂದು ಕೇಳಿ ಸಂತೋಷ್​ ತಿಂಡಿ ತಿನ್ನುತ್ತಿದ್ದ . ನನ್ನ ಗಂಡನ ಜೊತೆ ಕೆಲಸ ಮಾಡಿ ಗಂಡನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. 

ಬೆಂಗಳೂರು(ನ.30): ಬಿಜೆಪಿ ಮಾಧ್ಯಮ ಸಂಚಾಲಕ ವಿನಯ್​ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್ ಯಡಿಯೂರಪ್ಪಗೆ ವಿನಯ್​ ಪತ್ನಿ ಶೋಭಾ ಪತ್ರ ಬರೆದಿದ್ದಾರೆ. ನಮ್ಮ ಮನೆಗೆ ಬಂದು ತಿಂಡಿ ಮಾಡಿಕೊಡಿ ಎಂದು ಕೇಳಿ ಸಂತೋಷ್​ ತಿಂಡಿ ತಿನ್ನುತ್ತಿದ್ದ . ನನ್ನ ಗಂಡನ ಜೊತೆ ಕೆಲಸ ಮಾಡಿ ಗಂಡನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. 

ನಿಮ್ಮ ಸಂತೋಷ್​​ ಒಂದು ಚೂರೂ ನಿಯತ್ತು ಇಲ್ಲದ ವ್ಯಕ್ತಿ. ಅನ್ನ ತಿಂದ ಮನೆಗೆ ದ್ರೋಹ ಬಗೆದವರ ಪರ ನೀವು ನಿಂತಿದ್ದೀರಾ ಎಂದು ಬಿಎಸ್'ವೈ ಅವರನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಿಮಗೂ ಕೂಡ ಒಂದಲ್ಲ ಒಂದು ದಿನ ಇವನಿಂದ ತೊಂದರೆ ತಪ್ಪಿದ್ದಲ್ಲ. ನೀವೂ ಕೂಡ ಮುಖ್ಯಮಂತ್ರಿಯಾಗಿದ್ದವರು. ನಿಮಗೂ ಕೂಡ ಮೂವರು ಹೆಣ್ಣು ಮಕ್ಕಳಿದ್ದಾರೆ. ನಿಮ್ಮ ಮಕ್ಕಳಿಗೂ ನನ್ನ ರೀತಿಯೇ ಕಷ್ಟ ಬಂದಿದ್ದರೆ ನೀವು ಏನು ಮಾಡುತ್ತಿದ್ದೀರಾ ಎಂದು ಪತ್ರದಲ್ಲಿ ವಿನಯ್ ಪತ್ನಿ ಶೋಭಾ ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ನೀವು ಪ್ರಭಾವವನ್ನು ಬಳಸಿಕೊಂಡು ಸಂತೋಷ್'ನನ್ನು ಕಾಪಾಡುತ್ತಿದ್ದೀರಾ ಎಂದೂ ಕೇಳಿದ್ದು, ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ, ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಿ. ನೀವು ಕಾನೂನು ನಿಯಮಗಳಿಗೆ ನೀಡುವ ಗೌರವ ಇದೇ ತೆರನಾದುದೇ ಎಂದು ಪತ್ರ ಬರೆದು ಕೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಪಕ್ಷದ ಯಾವ ವ್ಯಕ್ತಿಗೂ ಕೂಡ ಸೌಜನ್ಯವನ್ನೂ ತೋರಿಸಿಲ್ಲ. ಧೈರ್ಯ ತುಂಬುವ ಕೆಲಸವನ್ನೂ ಕೂಡ ಮಾಡಿಲ್ಲ. ಇದೇನಾ ನಿಮ್ಮ ಪಕ್ಷದವರು ಮಾಡುವ ಕೆಲಸ ?. ನಿಮ್ಮನ್ನು ಸಂಪೂರ್ಣ ರಾಜ್ಯವೇ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾನು ನನ್ನ ಗಂಡ ಅವಳಿ ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇವೆ.

ನನ್ನ ಯಜಮಾನರು ಅನೇಕ ವರ್ಷಗಳಿಂದಲೂ ಕೂಡ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ಎಂಬ ಕ್ರಿಮಿನಲ್ ಅವರ ಸ್ನೇಹ ಗಳಿಸಿ ಹಿಂದೆ ಮುಂದೆ ತಿರುಗಿ ಕೆಲಸ ಮಾಡುತ್ತಿದ್ದ. ಸಂತೋಷ್'ನನ್ನು ನೀವು ಬೆಂಬಲಿಸುತ್ತೀರಾ ಎಂದು ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಿಮಗೆ ಕರುಣೆ ಇಲ್ಲವೇ. ಕೆಲಸವನ್ನು ಕೊಟ್ಟವರಿಗೇ ಹೀಗೆ ಮಾಡುವುದು ಎಷ್ಟು ಸರಿ ಎಂದು ಒಟ್ಟು 3 ಪುಟಗಳಷ್ಟು ಪತ್ರವನ್ನು ಬಿಎಸ್'ವೈಗೆ ಶೋಭಾ ಬರೆದಿದ್ದಾರೆ.