ಮೂಲತಃ ಮಂಡ್ಯದ ನಾಗಮಂಗಲದವರಾದ ವಿಮಲಾ ಗೌಡ ಅವರು ಜನಿಸಿದ್ದು 1955ರ ನವೆಂಬರ್ 20ರಂದು ಬೆಂಗಳೂರಿನಲ್ಲಿ. ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದ ವಿಮಲಾಗೌಡ 1980ರಲ್ಲಿ ಬಿಜೆಪಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಅಡಿ ಇಟ್ಟರು.
ಬೆಂಗಳೂರು(ಏ. 17): ಹಿರಿಯ ಬಿಜೆಪಿ ನಾಯಕಿ ವಿಮಲಾ ಗೌಡ(62) ವಿಧಿವಶರಾಗಿದ್ದಾರೆ. ಹಲವು ಕಾಲದಿಂದ ತೀವ್ರ ಹೃದಯ ತೊಂದರೆಯಿಂದ ಬಳಲುತ್ತಿದ್ದ ವಿಮಲಾಗೌಡ ಇಂದು ಸೋಮವಾರ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಾಜಿ ಉಪಸಭಾಪತಿ ವಿಮಲಾಗೌಡ ಬಿಜೆಪಿಯ ಪ್ರಮುಖ ಮಹಿಳಾ ಮುಖಂಡರಲ್ಲಿ ಒಬ್ಬರೆನಿಸಿದ್ದರು.
ವಿಮಲಾಗೌಡ ಅವರು 2011-2014ರ ಅವಧಿಯಲ್ಲಿ ವಿಧಾನಪರಿಷತ್'ನ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಸಭಾಪತಿ ಡಿಹೆಚ್ ಶಂಕರಮೂರ್ತಿ ಅವರ ಕಾರ್ಯನಿರ್ವಹಣೆಯಿಂದ ಅಸಮಾಧಾನಗೊಂಡು ಅಧಿಕಾರಾವಧಿಗೂ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೂಲತಃ ಮಂಡ್ಯದ ನಾಗಮಂಗಲದವರಾದ ವಿಮಲಾ ಗೌಡ ಅವರು ಜನಿಸಿದ್ದು 1955ರ ನವೆಂಬರ್ 20ರಂದು ಬೆಂಗಳೂರಿನಲ್ಲಿ. ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದ ವಿಮಲಾಗೌಡ 1980ರಲ್ಲಿ ಬಿಜೆಪಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಅಡಿ ಇಟ್ಟರು. 1994ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್'ಗೆ ಸಾಕಷ್ಟು ಪ್ರಯತ್ನಿಸಿ ವಿಫಲರಾಗಿದ್ದರು. ಅದೊಂದು ಅಸಮಾಧಾನ ಅವರನ್ನು ಕಾಡುತ್ತಿತ್ತೆನ್ನಲಾಗಿದೆ.
