ಇಲ್ಲಿನ ಜೊಯಿಡಾದ ಬಜಾರ ಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ರೇಷನ್ ತರಲು ಒಂದು ದಿನವೇ ಮೀಸಲಿಡಬೇಕಾಗಿದೆ. ಜನರು ಚಲಿಸುವ ರೈಲಿನಲ್ಲಿ ಸಾಗಿ 30 ರಿಂದ 40 ಕಿಲೋ ಮೀಟರ್ ಸಾಗಿ ರೇಶನ್ ತರಬೇಕಾದ ಸ್ಥಿತಿ ಇದೆ.
ಉತ್ತರಕನ್ನಡ (ಏ.29): ಇಲ್ಲಿನ ಜೊಯಿಡಾದ ಬಜಾರ ಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ರೇಷನ್ ತರಲು ಒಂದು ದಿನವೇ ಮೀಸಲಿಡಬೇಕಾಗಿದೆ. ಜನರು ಚಲಿಸುವ ರೈಲಿನಲ್ಲಿ ಸಾಗಿ 30 ರಿಂದ 40 ಕಿಲೋ ಮೀಟರ್ ಸಾಗಿ ರೇಶನ್ ತರಬೇಕಾದ ಸ್ಥಿತಿ ಇದೆ.
ಇಲ್ಲಿನ ಜನರ ರೇಷನ್ ಸಮಸ್ಯೆ ಬಗ್ಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಸುವರ್ಣ ನ್ಯೂಸ್'ನಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವ ವಾಗ್ದಾನ ನೀಡಿದ್ರು. ಆದ್ರೆ ಈವರೆಗೂ ಅಧಿಕಾರಿಗಳು ಇನ್ನು ಸಮಸ್ಯೆಗೆ ಸ್ಪಂದಿಸದೇ ಇದ್ದರಿಂದ ಯಥಾಸ್ಥಿತಿ ಮುಂದುವರಿದಿದೆ. ಜೋಯಿಡಾ ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈರೆ, ಕನ್ನೆ, ಡಿಗ್ಗಿ, ಬೊಂಡೋಲಿ, ಸೊಲಿಯೆ, ಸುಳಾವಲಿ, ದೂದಮಾಳಾ, ವೀರಲ್, ಇವೊಲಿ, ಬೊಂಡೂಕಾ ಮತ್ತಿತರ ಗ್ರಾಮದ ಜನರು ಚಲಿಸುವ ರೈಲನ್ನು ಹತ್ತಿ ಪಡಿತರ ತರುತ್ತಿದ್ದಾರೆ. ಸುಮಾರು 40 ಕಿಮೀ ಕ್ರಮಿಸಿ ಕ್ಯಾಸಲ್ ರಾಕ್ ಗೆ ತೆರಳಿ ರೇಷನ್ ತರುತ್ತಿದ್ದಾರೆ. ಇನ್ನು ಕೆಲವು ಗ್ರಾಮಗಳ ಜನತೆ ತೇರಾಲಿಗೆ ಹೋಗಿ ಪಡಿತರ ತರುತ್ತಿದ್ದಾರೆ. ಈ ಭಾಗದ ಜನತೆ ತಮಗೆ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ರೇಷನ್ ನೀಡುವಂತೆ ಹಲವಾರು ವರ್ಷಗಳಿಂದ ಮನವಿ ಮಾಡ್ತಾ ಬಂದಿದ್ರು. ಆದ್ರೂ ಯಾರು ಕ್ಯಾರೆ ಅಂತಿಲ್ಲವೆಂಬುವುದು ಗ್ರಾಮಸ್ಥರ ಗೋಳಾಗಿದೆ.
