ಯುರೇನಿಯಂ ಘಟಕ ಪನರಾರಂಭ ವಿರೋಧಿಸಿ ಗ್ರಾಮಸಭೆ ನಡೆಸಿದ ಜನತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯೂ ನಡೆಸಿದ್ದಾರೆ.

ಯಾದಗಿರಿ (ಫೆ.21): ಇಷ್ಟು ದಿನ ಸ್ತಬ್ದವಾಗಿದ್ದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಯುರೇನಿಯಂ ನಿಕ್ಷೇಪ ಹೊರ ತೆಗೆಯುವ ಘಟಕ ಮತ್ತೆ ಪುನರಾರಂಭವಾಗುವ ಸೂಚನೆಗಳು ಬಂದಿದೆ.

ಅಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಖಾತೆ ಸಚಿವರಾದ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿರುವುದರಿಂದ ಆ ಭಾಗದ ಜನತೆ ಆತಂಕ ಪಡುವಂತಾಗಿದೆ.

ಯುರೇನಿಯಂ ಘಟಕ ಪನರಾರಂಭ ವಿರೋಧಿಸಿ ಗ್ರಾಮಸಭೆ ನಡೆಸಿದ ಜನತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯೂ ನಡೆಸಿದ್ದಾರೆ.

ಯುರೇನಿಯಂ ಘಟಕ ಸ್ಥಾಪನೆ ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಮತ್ತು ಗೋಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಪ್ರತಿಭಟನಾ ಮೇರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಯುರೇನಿಯಂ ಘಟಕವನ್ನ ಸ್ಥಾಪನೆ ಮಾಡಬಾರದು ಎಂದು ವಿರೋದಿಸುತ್ತಿದ್ದಾರೆ.