ನವದೆಹಲಿ(ಜು.12): ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ವಿಕಾಸ್ ಸ್ವರೂಪ್ ಅವರ ನೇಮಕಕ್ಕೆ ಸಚಿವ ಸಂಪುಟ ಸಮಿತಿ ಅನುಮತಿ ನೀಡಿದ್ದು, ವಿಕಾಸ್ ಇದೇ ಆಗಸ್ಟ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಸಕ್ತ ಒಟ್ಟಾವಾದಲ್ಲಿ ಭಾರತೀಯ ಹೈಕಮಿಷನರ್ ಆಗಿ ಕಾರ್ಯನಿರ್ಹಿಸುತ್ತಿರುವ ವಿಕಾಸ್ ಸ್ವರೂಪ್, 1986ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದಾರೆ.