Asianet Suvarna News Asianet Suvarna News

ಗಡಿ ಸುದ್ದಿಗೆ ಬರಬೇಡಿ, ನಾವು ಶಾಂತಿ ಪ್ರಿಯರು: ಚೀನಾದ ಜುಲ್ಫಿಕರ್ ವಿರುದ್ಧ ಗೆಲುವಿನ ಪಂಚ್

ಭಾರತದ ಖ್ಯಾತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಮ್ಮ ಬಲಿಷ್ಠ ಹೊಡೆತದ ಮೂಲಕ ಚೀನಾದ ಜುಲ್ಫಿಕರ್‌ ಮೈ ಮೈ ತೈಲಿಯನ್ನು ಪರಾಭವಗೊಳಿಸಿ ಚೀನಾಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಿಂಗ್‌, ಈ ಪಂದ್ಯದ ಮೂಲಕ ಚೀನಾಗೆ ಸಂದೇಶ ನೀಡುತ್ತಿದ್ದು, ನಮ್ಮ ಗಡಿ ಸುದ್ದಿಗೆ ಬರಬೇಡಿ ನಾವು ಶಾಂತಿ ಪ್ರಿಯರು' ಎಂದಿದ್ದಾರೆ.

Vijender offers to return title wants peace with China

ನವದೆಹಲಿ(ಆ.06): ಭಾರತದ ಖ್ಯಾತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಮ್ಮ ಬಲಿಷ್ಠ ಹೊಡೆತದ ಮೂಲಕ ಚೀನಾದ ಜುಲ್ಫಿಕರ್‌ ಮೈ ಮೈ ತೈಲಿಯನ್ನು ಪರಾಭವಗೊಳಿಸಿ ಚೀನಾಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಿಂಗ್‌, ಈ ಪಂದ್ಯದ ಮೂಲಕ ಚೀನಾಗೆ ಸಂದೇಶ ನೀಡುತ್ತಿದ್ದು, ನಮ್ಮ ಗಡಿ ಸುದ್ದಿಗೆ ಬರಬೇಡಿ ನಾವು ಶಾಂತಿ ಪ್ರಿಯರು' ಎಂದಿದ್ದಾರೆ.

ನಾನು ಜುಲ್ಫಿಕರ್‌ ಮೈಮೈತೈಲಿಯವರ ಈ ಬೆಲ್ಟ್‌ನ್ನು ಅವರಿಗೇ ಹಿಂತಿರುಗಿಸುತ್ತೇನೆ, ಆದರೆ ಮುಂದೆಂದೂ ಚೀನಾ ನಮ್ಮ ಗಡಿ ವಿಚಾರಕ್ಕೆ ಬರಬಾರದು, ಈ ಮೂಲಕ ನಾನು ಶಾಂತಿಯನ್ನು ಚೀನಾದಿಂದ ಬಯಸುತ್ತಿದ್ದೇನೆ' ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ. ಅಲ್ಲದೇ ಈ ಕುರಿತು ಟ್ವೀಟ್‌ ಸಹ ಮಾಡಿದ್ದಾರೆ.

ಭಾರತ ಮತ್ತು ಚೀನಾ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಹಾಗೂ ಗಡಿ ವಿವಾದಗಳು ಹದಗೆಟ್ಟಿರುವುದರಿಂದ ನಿನ್ನೆ ನಡೆದ ಈ ಪಂದ್ಯ ಅಂತಿಮ ಘಟ್ಟದವರೆಗೂ ಕುತೂಹಲ ಕೆರಳಿಸಿತ್ತು. ಚೀನಾ ಸ್ಪರ್ಧಿಯ ಏಟಿಗೆ ಎದಿರೇಟು ನೀಡಿದ ವಿಜೇಂದರ್‌ ಸಿಂಗ್‌ ಕೊನೇ ಹತ್ತು ಸುತ್ತುಗಳವರೆಗೆ ನಡೆದ ರೋಚಕ ಬಾಕ್ಸಿಂಗ್‌ ಫೈಟ್‌ನಲ್ಲಿ ಅಂತಿಮವಾಗಿ 96-93, 95-94, 95-94 ಅಂತರದ ಮೂಲಕ ಡಬ್ಬಲ್‌ ಬೆಲ್ಟ್‌ ಗೆದ್ದರು. ಪಂದ್ಯದುದ್ದಕ್ಕೂ ಚೀನಾ ಬಾಕ್ಸರ್‌ಗೆ ದಿಟ್ಟ ಪ್ರತಿರೋಧ ನೀಡಿದ ವಿಜೇಂದರ್‌ ಸರ್ವಾನುಮತದ ಗೆಲುವು ಸಾಧಿಸಿದರು. ಈ ಮೂಲಕ ವಿಜೇಂದರ್‌ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 9ನೇ ಗೆಲುವಿನೊಂದಿಗೆ ವಿಜಯಯಾತ್ರೆ ಮುಂದುವರಿಸಿದ್ದಾರೆ.

Follow Us:
Download App:
  • android
  • ios