ಬ್ಯಾನರ್ ವಿಚಾರದಲ್ಲಿ ಕಲ್ಲುತೂರಾಟ, ಜನಾರ್ಧನ ರೆಡ್ಡಿ ಮನೆ ಮುಂದೆ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇತ್ತ ಘಟನಾ ಸ್ಥಳಕ್ಕೆ ಶ್ರೀರಾಮಲು ಭೇಟಿ ನೀಡಿದ್ದಾರೆ. 

ಬಳ್ಳಾರಿ (ಜ.01) ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ಮಧ್ಯೆ ಗಲಾಟೆ ಆರಂಭಗೊಂಡು ಕಲ್ಲುತೂರಾಟ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಎರಡೂ ಗುಂಪಿಗಳ ನಡುವೆ ಬಡಿದಾಟ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಬಿಗುುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಬಿಜೆಪಿ ನಾಯಕ ಶ್ರೀರಾಮುಲು ಭೇಟಿ ನೀಡಿದ್ದಾರೆ. ಇದೀಗ ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಜಮಾಯಿಸಿದ್ದಾರೆ.

ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ಭಾರಿ ಗಲಾಟೆ

ಜನವರಿ 3ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಹಿನ್ನಲೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಬ್ಯಾನರ್ ಅಳವಡಿಸಿದ್ದಾರೆ. ನಗರದೆಲ್ಲಡೆ ಬ್ಯಾನರ್ ಅಳವಡಿಸಿದ್ದಾರೆ. ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಅಳವಡಿಕೆಗೆ ಜನಾರ್ಧನ ರೆಡ್ಡಿ ಬೆಂಬಲಿಗರು ವಿರೋಧಿಸಿದ್ದಾರೆ.ಎರಜು ಗುಂಪುಗಳ ನಡುವೆ ಗಲಾಟೆ ಜೋರಾಗಿ ಕಲ್ಲುತೂರಾಟ ನಡೆದಿದೆ. ಇದೇ ವೇಳೆ ಮಧ್ಯಪ್ರವೇಶಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ.ಬಳ್ಳಾರಿ ನಗರದ ಅವಂಬಾವಿ ಏರಿಯಾ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಜನಾರ್ಧನರೆಡ್ಡಿ ಮನೆಗೆ ದೌಡಾಯಿಸಿದ ಶ್ರೀರಾಮುಲು

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಜನಾರ್ಧನ ರೆಡ್ಡಿ ಮನೆಗೆ ಬಿಜೆಪಿ ನಾಯಕ ಶ್ರೀರಾಮುಲು ದೌಡಾಯಿಸಿದ್ದಾರೆ. ಇದೇ ವೇಳೆ ಜನಾರ್ಧನ ರೆಡ್ಡಿ ಮನೆ ಮುಂದೆ ಬಿಜೆಪಿ ನಾಯಕರು, ಕಾರ್ಯಕರ್ತರು ಆಗಮಿಸಿದ್ದಾರೆ. ಇದರಿಂಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ಮಧ್ಯೆ ಜಗಳ ವಾಗ್ವಾದ ನಡೆದಿದೆ.

ಈ ಗಲಾಟೆ ರಾಜಕೀಯವಾಗಿ ಭಾರಿ ಮೈಲೇಜ್ ಪಡೆದುಕೊಂಡಿದೆ. ಎರಡು ಗುಂಪುಗಳ ನಡುವಿನ ಜಗಳವನ್ನು ಭಾರಿ ಪೊಲೀಸ್ ಪಡೆ ನಿಯಂತ್ರಿಸಿದೆ. ಇದೇ ವೇಳೆ ಮಾತುಕತೆ ಪ್ರಯತ್ನಗಳು ನಡೆಯುತ್ತಿದೆ. ಆದರೆ ಎರಡು ಗುಂಪುಗಳು ಒಂದು ಹೆಜ್ಜೆ ಹಿಂದಿಡಲು ನಿರಾಕರಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುತ್ತಿದೆ.