ಮಲಯಾಳಂ'ನ ಹಿರಿಯ ನಟರಾದ ವಿಜಯ್ ರಾಘವನ್ ಬೆಂಗಳೂರು ಡೇಸ್' ರಾವಣ ಪ್ರಭು, ಲೀಲಾ ಸೇರಿದಂತೆ ಹಲವು ಸಿನಿಮಾ'ಗಳಲ್ಲಿ ಅಭಿನಯಿಸಿದ್ದಾರೆ.
ತಿರುವನಂತಪುರಂ(ಮೇ.11): ಹಿರಿಯ ಮಲಯಾಳಂ ನಟ ವಿಜಯ್ ಎಂದೇ ಖ್ಯಾತಿ ಪಡೆದಿರುವ ವಿಜಯರಾಘವನ್ ಮೃತಪಟ್ಟರೆಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್'ಅಪ್, ಫೇಸ್'ಬುಕ್'ನಾದ್ಯಂತ ಹರಿದಾಡುತ್ತಿದೆ.
ಮೃತದೇಹ ಸಾಗಿಸುವ ಆಂಬ್ಯಲೆನ್ಸ್'ನಲ್ಲಿ ಮುಂಭಾಗ ವಿಜಯ್ ರಾಘವನ್ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹೊದಿಸಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರದಿಂದ ಹರಿದಾಡುತ್ತಿದೆ. ಸ್ವತಃ ಅವರು ಮೃತಪಟ್ಟಿರುವ ವಿಷಯವನ್ನು ಅವರ ಪುತ್ರ'ನಿಂದ ತಿಳಿದುಕೊಂಡರಂತೆ.' ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದು, ಯಾರು ಇದನ್ನು ನಂಬಬಾರದೆಂದು ಅಭಿಮಾನಿಗಳು ಹಾಗೂ ಸಂಬಂಧಿಕರಿಗೆ ಮನವಿ ಮಾಡಿದ್ದಾರೆ.

ನಾನು ಬದುಕಿರುವ ಸುದ್ದಿಯನ್ನು ಎಲ್ಲರಿಗೂ ಖಚಿತಪಡಿಸುವುದರಲ್ಲೇ ಫೋನ್ ಹಾಗೂ ಸಂದೇಶ ಕಳುಹಿಸುವುದರಲ್ಲಿ ನಾನು ಬ್ಯಸಿಯಾಗಿದ್ದೇನೆ. ಅಸಲಿಗೆ ಆ ಚಿತ್ರ ನಟ ದಿಲೀಪ್ ಅಭಿನಯದ ಮಲಯಾಳಂ' ಸಿನಿಮಾದ್ದಾಗಿದೆ. ಈ ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ದೂರು ನೀಡಲು ಹೋಗುವುದಿಲ್ಲ. ಇದು ಕಪೋಕಲ್ಪಿತ ಎಂದು ಮರೆತು ಬಿಡುತ್ತೇನೆ. ಆದಾಗ್ಯೂ ಕೇರಳ ಪೊಲೀಸ್ ಡಿಜಿಪಿಯಾದ ಟಿಪಿ ಸೇನ್ ಕುಮಾರ್ ಸುಳ್ಳು ಸುದ್ದಿ ಹರಿಯ ಬಿಟ್ಟಿರುವವರ ವಿರುದ್ಧ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.
ಮಲಯಾಳಂ'ನ ಹಿರಿಯ ನಟರಾದ ವಿಜಯ್ ರಾಘವನ್ಬೆಂಗಳೂರು ಡೇಸ್' ರಾವಣ ಪ್ರಭು, ಲೀಲಾ ಸೇರಿದಂತೆ ಹಲವು ಸಿನಿಮಾ'ಗಳಲ್ಲಿ ಅಭಿನಯಿಸಿದ್ದಾರೆ.
ಮೂಲ: newsable asianetnews
