ವಿಜಯಪುರ (ಮೇ. 21): ಪ್ರಧಾನಿ ನರೇಂದ್ರ ಮೋದಿಯನ್ನು ಪೊಲೀಸ್ ಪೇದೆಯೊಬ್ಬರು ಅವಮಾನಿಸಿದ್ದಾರೆ. ವಿಜಯಪುರ ಡಿಆರ್ ವಿಭಾಗದ ಮುಖ್ಯ ಪೇದೆ ಶಹನವಾಜ್ ಬೇಗ್ ರಾಜಕೀಯ ಪ್ರೇರಿತ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

ನಮೋ ವಿರುದ್ಧದ ಪೋಸ್ಟ್ ಗಳನ್ನ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಮೋದಿ ಕೇದಾರನಾಥ ಭೇಟಿ ಹಾಗೂ ಧ್ಯಾನವನ್ನು ಲೇವಡಿ ಮಾಡಿದ್ದಾರೆ. ಅದೇ ರೀತಿ ಎಕ್ಸಿಟ್ ಪೋಲ್ ಗಳ ಬಗ್ಗೆ ಅನ್ ಅಫಿಶಿಯಲ್ ಪೇಜ್ ವೊಂದು ಹಾಕಿದ್ದ ಪೋಸ್ಟನ್ನು ಶೇರ್ ಮಾಡಿದ್ದಾರೆ.

ಮುಖ್ಯ ಪೇದೆ ಶಹನವಾಜ್ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ನೌಕರರು ರಾಜಕೀಯ ಪ್ರೇರಿತ ಪೋಸ್ಟ್ ಗಳನ್ನ ಹಾಕುವುದು ಶೇರ್ ಮಾಡುವುದು ಕಾನೂನು ಉಲ್ಲಂಘಿಸಿದಂತೆ. ಆದಾಗ್ಯೂ ಶಹನವಾಜ್ ಈ ರೀತಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ.