ಧರ್ಮರಾಜ್ ತಾಯಿ ವಿಮಲ ಅವರು ಕೂಡ ಪೊಲೀಸರು ಮಹಾದೇವ್ ಅವರಿಂದ ದುಡ್ಡು ಪಡೆದು ನನ್ನ ಮಗನನ್ನು ಹತ್ಯೆ ಮಾಡಿದ್ದಾರೆ'ಎಂದು ಆರೋಪ ಮಾಡಿದ್ದಾರೆ.
ವಿಜಯಪುರ(ಅ.30): ಭೀಮ ತೀರದಲ್ಲಿ ಇಂದು ಪೊಲೀಸ್ ಫೈರಿಂಗ್'ನಲ್ಲಿ ಹತನಾದ ಹಂತಕ ಧರ್ಮರಾಜ್' ಎನ್'ಕೌಂಟರ್'ಗೆ ಪೊಲೀಸರು ಸುಪಾರಿ ಪಡೆದರೆಂಬ ಆರೋಪ ಕೇಳಿಬರುತ್ತಿದೆ.
ಹಂತಕ ಪುತ್ರಪ್ಪ ಸಾಹುಕಾರ್ ಹಾಗೂ ಫಯಾಜ್ ಮುಷರಫ್ಕೊಲೆಯಲ್ಲಿ ಆರೋಪಿಯಾಗಿದ್ದು, ಕೆಲ ದಿನಗಳ ಹಿಂದೆ ಜಾಮೀನಿನ ಮೇರೆಗೆ ಹೊರ ಬಂದಿದ್ದ. ಈತನನ್ನು ಮಹಾದೇವ್ ಸಾಹುಕಾರ್ ಪೊಲೀಸರಿಗೆ ಹಣ ನೀಡಿ ಹತ್ಯೆ ಮಾಡಿಸಿರುವುದಾಗಿ ಆರೋಪ ಕೇಳಿಬಂದಿದೆ.
ತನ್ನ ಅಣ್ಣನ ಹತ್ಯೆಗೆ ಪ್ರತಿಕಾರವಾಗಿ ಮಹಾದೇವ್ ಸಾಹುಕಾರ್ ಪೊಲೀಸರಿಗೆ 5 ಕೋಟಿ ರೂ. ನೀಡಿದ್ದು, ಇತ್ತೀಚಿಗಷ್ಟೆ ವರ್ಗಾವಣೆಯಾಗಿದ್ದ ಪೊಲೀಸರು ಎನ್'ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ಧರ್ಮರಾಜ್ ತಾಯಿ ವಿಮಲ ಅವರು ಕೂಡ ಪೊಲೀಸರು ಮಹಾದೇವ್ ಅವರಿಂದ ದುಡ್ಡು ಪಡೆದು ನನ್ನ ಮಗನನ್ನು ಹತ್ಯೆ ಮಾಡಿದ್ದಾರೆ'ಎಂದು ಆರೋಪ ಮಾಡಿದ್ದಾರೆ. ಧರ್ಮರಾಜ್' ದೇಹಕ್ಕೆ 8 ಗುಂಡು ಹೊಕ್ಕಿದ್ದು ಅದರಲ್ಲಿ ಕೇವಲ 2 ಗುಂಡು ಮಾತ್ರ ಸರ್ವೀಸ್ ರಿವಾಲ್ವಾರ್'ನಿಂದ ಸಿಡಿದಿವೆ. ಇದು ಆರೋಪಕ್ಕೆ ಮತ್ತಷ್ಟು ಪುರಾವೆ ನೀಡಿದಂತಾಗಿದೆ.
ಆರೋಪ ನಿರಾಕರಿಸದ ಸಾಹುಕಾರ್ ಮಹಾದೇವ್
ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ ಮಹಾದೇವ್ ಸಾಹುಕಾರ್' ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ಈ ರೀತಿ ಮಾಡುವವನಲ್ಲ. ಧರ್ಮ'ರಾಜ್'ಗೂ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ. ನನ್ನ ಇಬ್ಬರು ಅಣ್ಣಂದಿರು ಕೊಲೆಯಾಗಿದ್ದಾರೆ. ಈ ಕಾರಣದಿಂದ ನಾನು ಗನ್ ಮ್ಯಾನ್'ಗಳನ್ನು ಇಟ್ಟುಕೊಂಡಿದ್ದೇನೆ. ನನ್ನ ಮನೆ ದೇವರಾಣೆಗೂ ನಾನು ಹಣ ನೀಡಿ ಹತ್ಯೆ ಮಾಡಿಸಿಲ್ಲ'. ಎಂದು ತಿಳಿಸಿದ್ದಾರೆ.
