ಅಂಬ್ಯೂಲೆನ್ಸ್ ಚಾಲಕನಿಗೆ ಇದು ತಪ್ಪಲ್ವಾ ಎಂದು ಕೇಳಿದಾಗ, ಹಿರಿಯ ವೈದ್ಯರು ಹೇಳಿದ ಹಾಗೆ ತಾನು ಕೇಳದೇ ಹೋದ್ರೆ ಕೆಲಸಕ್ಕೆ ಕುತ್ತು ಬರುತ್ತೆಂದು ಬೆದರಿಕೆ ಹಾಕುತ್ತಾರೆಂದು ಉತ್ತರಿಸುತ್ತಾನೆ. ಸದ್ಯ ಅಂಬ್ಯೂಲೆನ್ಸ್'ನ್ನು ಜಲನಗರ ಠಾಣೆಗೆ ತರಲಾಗಿದ್ದು ಮೇಲಧಿಕಾರಿಗಳು ವೈದ್ಯನ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ  ಎಂದು ಕಾದು ನೋಡಬೇಕಿದೆ.

ವಿಜಯಪುರ(ಸೆ. 04): ಸರ್ಕಾರಿ ಆ್ಯಂಬುಲೆನ್ಸ್ ರೋಗಿಗಳ ಹಾಗೂ ಅಪಘಾತಕ್ಕೀಡಾದವ್ರ ಪ್ರಾಣ ಉಳಿಸಲು ಇರ್ತಾವೆ. ಆದ್ರೆ ಅವೇ ಅಂಬ್ಯೂಲೆನ್ಸ್'ಗಳು ಸರ್ಕಾರಿ ವೈದ್ಯರ ಮನೆ ಕೆಲಸಕ್ಕೆ ಬಳಕೆಯಾದರೆ ಹೇಗೆ? ಇಂಥದ್ದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿಯ ಕೀರ್ತಿ ನಗರದ ರವಿ ಕಟ್ಟಿಮನಿ ಎಂಬ ವೈದ್ಯ ಕೊಪ್ಪಳ ಜಿಲ್ಲೆ ಯಲ್ಬುರ್ಗಿ ತಾಲೂಕಿನ ಹನುಮಸಾಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ವೈದ್ಯ ರವಿ ಅವರು ಹನುಮಸಾಗರದ ಲ್ಲಿ ಖಾಸಗಿ ಕ್ಲಿನಿಕ್ ತೆರೆಯಲು ಸಿದ್ಧವಾಗಿದ್ದು, ಅದಕ್ಕಾಗಿ ವಿಜಯಪುರದಿಂದ ಪಿಠೋಪಕರಣ ಸಾಗಿಸಲು ಯಲಬುರ್ಗಾ ತಾಲೂಕಿನ ಮಂಗಳೂರು ಆರೋಗ್ಯ ಕೇಂದ್ರದ ಅಂಬ್ಯೂಲೆನ್ಸ್'ನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಂಬ್ಯೂಲೆನ್ಸ್'ನಲ್ಲಿ ಗ್ಯಾಸ್ ಸಿಲೆಂಡರ್, ಕುರ್ಚಿ, ಟೇಬಲ್, ಮಾತ್ರೆ, ಔಷಧಿ ಸೇರಿದಂತೆ ಅಗತ್ಯ ಪರಿಕರಗಳನ್ನು ಸಾಗಿಸುತ್ತಿದ್ದರು. ಆದ್ರೆ ಇದನ್ನು ಗಮನಿಸಿದ ಜನ್ರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ವೈದ್ಯ ಡಾ. ರವಿ ವೇಗವಾಗಿ ರಾ ಷ್ಟ್ರೀಯ ಹೆದ್ದಾರಿ 51ರಲ್ಲಿ ಸಾಗುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲೇ ವಾಹನವನ್ನು ಹಿಡಿದ ಜನ್ರು ವೈದ್ಯನಿಗೆ ಛೀಮಾರಿ ಹಾಕಿಕಿದ್ದಾರೆ. ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಯರಗಲ್ ಅವರಿಗೆ ಕರೆ ಮಾಡಿ ತಿಳಿಸಿದ್ರೆ, ಅವರು ಕೊಪ್ಪಳ ಡಿಹೆಚ್ಓ ಅವ್ರಿಗೆ ತಿಳಿಸಿ ಎಂದು ನುಣಚಿಕೊಳ್ಳುತ್ತಾರೆ.

ಈ ಬಗ್ಗೆ ಅಂಬ್ಯೂಲೆನ್ಸ್ ಚಾಲಕನಿಗೆ ಇದು ತಪ್ಪಲ್ವಾ ಎಂದು ಕೇಳಿದಾಗ, ಹಿರಿಯ ವೈದ್ಯರು ಹೇಳಿದ ಹಾಗೆ ತಾನು ಕೇಳದೇ ಹೋದ್ರೆ ಕೆಲಸಕ್ಕೆ ಕುತ್ತು ಬರುತ್ತೆಂದು ಬೆದರಿಕೆ ಹಾಕುತ್ತಾರೆಂದು ಉತ್ತರಿಸುತ್ತಾನೆ. ಸದ್ಯ ಅಂಬ್ಯೂಲೆನ್ಸ್'ನ್ನು ಜಲನಗರ ಠಾಣೆಗೆ ತರಲಾಗಿದ್ದು ಮೇಲಧಿಕಾರಿಗಳು ವೈದ್ಯನ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ ಎಂದು ಕಾದು ನೋಡಬೇಕಿದೆ.

ವರದಿ: ಪ್ರಸನ್ನ ದೇಶಪಾಂಡೆ, ಸುವರ್ಣನ್ಯೂಸ್, ವಿಜಯಪುರ