ಇದೀಗ ಮೂರು ಬ್ಯಾಂಕ್ ಗಳ ವಿಲೀನಕ್ಕೆ ಒಪ್ಪಿಗೆಯು ದೊರಕಿದೆ. ವಿಜಯಾ ಬ್ಯಾಂಕ್, ದೇನಾ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಯಾಗಲು ತಾತ್ವಿಕ ಒಪ್ಪಿಗೆ ನೀಡಿದೆ. 

ನವದೆಹಲಿ: ಬ್ಯಾಂಕ್‌ ಆಫ್‌ ಬರೋಡಾ ಹಾಗೂ ದೇನಾ ಬ್ಯಾಂಕ್‌ ಜೊತೆ ವಿಲೀನಕ್ಕೆ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್‌ ಶನಿವಾರ ತಾತ್ವಿಕ ಒಪ್ಪಿಗೆ ನೀಡಿದೆ. 

ಬ್ಯಾಂಕ್‌ ಆಫ್‌ ಬರೋಡಾ, ವಿಜಯಾ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ದೇಶದ ಎರಡನೇ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ನಿರ್ಮಾಣ ಮಾಡುವುದಾಗಿ ಈ ತಿಂಗಳ ಆರಂಭದಲ್ಲಿ ಸರ್ಕಾರ ಘೋಷಿಸಿತ್ತು. 

ಶನಿವಾರ ನಡೆ ವಿಜಯಾ ಬ್ಯಾಂಕ್‌ ಮಂಡಳಿಯ ಸಭೆಯ ವೇಳೆ ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ನೀಡಲಾಗಿದೆ. ವಿಲೀನದಿಂದ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ.