ಗೋವಾದ ಕಾಂಡೋಲಿಯಮ್​ ಏರಿಯಾದಲ್ಲಿ ವಿಜಯ್​ ಮಲ್ಯಾರ ಐಷರಾಮಿ ಲವೀಶ್​ ಬಂಗಲೆ ಭಾರೀ ಸದ್ದು ಮಾಡಿತ್ತು. 

ಪಣಜಿ(ಏ.08): ಉದ್ಯಮಿ ವಿಯ್​ ಮಲ್ಯ ಒಡೆತನದ ಗೋವಾದ ಕಿಂಗ್​ಫಿಷರ್​ ವಿಲ್ಲಾ ಕೊನೆಗೂ ಸೇಲ್​ ಆಗಿದೆ. 73 ಕೋಟಿಗೆ ಸಚಿನ್​ ಜೋಷಿ ಎಂಬ ಉದ್ಯಮಿ ಲವೀಶ್​ ಬಂಗಲೆಯನ್ನು ಖರೀದಿಸಿದ್ದಾರೆ.

ಹರಾಜು ಪ್ರಕ್ರಿಯೆ ವೇಳೆ ನಿಗದಿಪಡಿಸಿದ್ದ ಪ್ರಾರಂಭಿಕ ದರ 73 ಕೋಟಿಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಸಚಿನ್​ ಜೋಷಿ ವಿಲ್ಲಾವನ್ನು ಖರೀದಿಸಿದ್ದಾರೆ. ವಿಕಿಂಗ್​ ಮೀಡಿಯಾ ಅಂಡ್​ ಎಂಟರ್​ಟೈನ್​ಮೆಂಟ್​ ಸಿನಿಮಾ ನಿರ್ಮಾಣ ಕಂಪೆನಿ ವಿಜಯ್​ ಮಲ್ಯಾರ ಲವೀಶ್​ ಬಂಗಲೆಯನ್ನ ಖರೀದಿಸಿದೆ.

ಗೋವಾದ ಕಾಂಡೋಲಿಯಮ್​ ಏರಿಯಾದಲ್ಲಿ ವಿಜಯ್​ ಮಲ್ಯಾರ ಐಷರಾಮಿ ಲವೀಶ್​ ಬಂಗಲೆ ಭಾರೀ ಸದ್ದು ಮಾಡಿತ್ತು. ಹಲವು ತಿಂಗಳಿಂದ ಎಸ್​ಬಿಐ ಸೇರಿ ವಿವಿಧ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಸಾವಿರಾರು ಕೋಟಿ ಹಣ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವುದರಿಂದ ಎಸ್​ಬಿಐ ಬ್ಯಾಂಕ್​ ಲವೀಶ್​ ಬಂಗಲೆಯನ್ನ ಹರಾಜು ಹಾಕಿತ್ತು.