9 ಸಾವಿರ ಕೋಟಿ ರು. ಸಾಲ ಮಾಡಿಕೊಂಡು ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಸಿಂಗಾಪುರದ ಬಿಒಸಿ ಏವಿಯೇಶನ್‌ ಕಂಪನಿಗೆ ಮಲ್ಯ ಅವರು 90 ದಶಲಕ್ಷ ಪೌಂಡ್‌ ಪರಿಹಾರ ನೀಡಬೇಕು ಎಂದು ಬ್ರಿಟನ್‌ ಹೈಕೋರ್ಟ್‌ ಆದೇಶಿಸಿದೆ.

ಸಿಂಗಾಪುರ : 9 ಸಾವಿರ ಕೋಟಿ ರು. ಸಾಲ ಮಾಡಿಕೊಂಡು ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಸಿಂಗಾಪುರದ ಬಿಒಸಿ ಏವಿಯೇಶನ್‌ ಕಂಪನಿಗೆ ಮಲ್ಯ ಅವರು 90 ದಶಲಕ್ಷ ಪೌಂಡ್‌ ಪರಿಹಾರ ನೀಡಬೇಕು ಎಂದು ಬ್ರಿಟನ್‌ ಹೈಕೋರ್ಟ್‌ ಆದೇಶಿಸಿದೆ.

ಸೇವೆ ಸ್ಥಗಿತಗೊಳಿಸಿರುವ ಮಲ್ಯ ಅವರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ವಿಮಾನ ಕಂಪನಿಗೆ ಬಿಒಸಿ ಏವಿಯೇಶನ್‌ ಕಂಪನಿಯು 3 ವಿಮಾನಗಳನ್ನು ಗುತ್ತಿಗೆ ನೀಡಿತ್ತು. ಈ ಸಂಬಂಧ ಮಲ್ಯ ಭಾರಿ ಪ್ರಮಾಣದ ಬಾಕಿ ಉಳಿಸಿಕೊಂಡಿದ್ದರು. ತನಗೆ ಕೊಡಬೇಕಾದ ಬಾಕಿ ನೀಡಬೇಕು ಎಂದು ಬಿಒಸಿ ಕಂಪನಿಯು ಬ್ರಿಟನ್‌ ಹೈಕೋರ್ಟ್‌ ಮೊರೆ ಹೋಗಿತ್ತು.

ಈ ಹಿನ್ನೆಲೆಯಲ್ಲಿ ಈಗ 90 ದಶಲಕ್ಷ ಪೌಂಡ್‌ ಪರಿಹಾರವನ್ನು ಮಲ್ಯ ಕಟ್ಟಿಕೊಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ. ಬಿಒಸಿ ಏವಿಯೇಶನ್‌ ಕಂಪನಿಯು ವಿಮಾನಗಳನ್ನು ವಿವಿಧ ಏರ್‌ಲೈನ್ಸ್‌ಗಳಿಗೆ ಗುತ್ತಿಗೆ ನೀಡುವ ಸಂಸ್ಥೆಯಾಗಿದೆ.