Asianet Suvarna News Asianet Suvarna News

ಮಲ್ಯರ 680 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹರಾಜು

ಬೆಂಗಳೂರು, ಮುಂಬೈ, ನವದೆಹಲಿ, ಕೋಲ್ಕತಾ, ಸ್ಕಾಟ್ಲೆಂಡ್, ಹಾಂಗ್‌'ಹಾಂಗ್‌'ನಲ್ಲಿ ಇರುವ ಈ ಆಸ್ತಿಗಳ ಮೌಲ್ಯ ಅಂದಾಜು 680 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Vijay Mallya Rs 680 Crore Seaside 13 Properties To Be Auctioned

ಮುಂಬೈ(ಫೆ.23): ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಬೆಂಗಳೂರು ಸೇರಿದಂತೆ ದೇಶ- ವಿದೇಶಗಳಲ್ಲಿನ 13 ಆಸ್ತಿಗಳನ್ನು ಶೀಘ್ರವೇ ಹರಾಜು ಹಾಕಲು ಯುನೈಟೆಡ್ ಸ್ಪಿರಿಟ್ (ಯುಎಸ್‌ಎಲ್) ಕಂಪನಿ ನಿರ್ಧರಿಸಿದೆ.

ಭಾರತದ ಅತಿದೊಡ್ಡ ಮದ್ಯ ಉತ್ಪಾದನಾ ಕಂಪನಿಯಾದ ಯುನೈಟೆಡ್ ಸ್ಪಿರಿಟ್‌ನ ಅಧ್ಯಕ್ಷ ಹುದ್ದೆಯನ್ನು ಕಳೆದ ವರ್ಷ ಮಲ್ಯ ತ್ಯಜಿಸಿದ್ದರು. ಈ ವೇಳೆ ಅವರ ಜೊತೆ ಯುಎಸ್‌'ಎಲ್ ಮಾಡಿಕೊಂಡ ಒಪ್ಪಂದದಂತೆ, 2017ರ ಫೆ.21ರೊಳಗೆ ಮಲ್ಯ ಅವರಿಗೆ ಮಾರುಕಟ್ಟೆ ದರಕ್ಕಿಂತ ಶೇ.10ರಷ್ಟು ಕಡಿಮೆ ದರದಲ್ಲಿ ಈ 13 ಆಸ್ತಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಆ ಗುಡುವು ಮುಗಿದಿರುವ ಹಿನ್ನೆಲೆಯಲ್ಲಿ, ಮಲ್ಯ ಹೆಸರಲ್ಲಿ ಇರುವ 4 ಸಾವಿರ ಕೋಟಿ ರೂಪಾಯಿ ಸಾಲ ತೀರಿಸುವ ಯೋಜನೆಯ ಒಂದು ಭಾಗವಾಗಿ ಈ 13 ಆಸ್ತಿಗಳನ್ನು ಹರಾಜು ಹಾಕಲು ಯುಎಸ್‌'ಎಲ್ ನಿರ್ಧರಿಸಿದೆ.

ಬೆಂಗಳೂರು, ಮುಂಬೈ, ನವದೆಹಲಿ, ಕೋಲ್ಕತಾ, ಸ್ಕಾಟ್ಲೆಂಡ್, ಹಾಂಗ್‌'ಹಾಂಗ್‌'ನಲ್ಲಿ ಇರುವ ಈ ಆಸ್ತಿಗಳ ಮೌಲ್ಯ ಅಂದಾಜು 680 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಪೈಕಿ ಮುಂಬೈನಲ್ಲಿನ ಮಲ್ಯ ಅವರ ಮನೆ ನೀಲಾದ್ರಿಯೊಂದೇ 400 ಕೋಟಿ ರೂಪಾಯಿ ಬೆಲೆಬಾಳಲಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios