ಮಲ್ಯ ಸಾಲದ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ ..?

Vijay Mallya Routed Loan Funds To F1, IPL Teams
Highlights

ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆಂದು ಪಡೆದ ಸಾಲದ ಹಣವನ್ನು ಉದ್ಯಮಿ ವಿಜಯ್ ಮಲ್ಯ ಅವರು ಅನ್ಯ ಉದ್ದೇಶಳಿಗೆ ಬಳಸಿದ್ದ ವಿಷಯವನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ. 

ಮುಂಬೈ: ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆಂದು ಪಡೆದ ಸಾಲದ ಹಣವನ್ನು ಉದ್ಯಮಿ ವಿಜಯ್ ಮಲ್ಯ ಅವರು ಅನ್ಯ ಉದ್ದೇಶಳಿಗೆ ಬಳಸಿದ್ದ ವಿಷಯವನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ. ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ 6027 ಕೋಟಿ ರು. ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಸೋಮವಾರ ನ್ಯಾಯಾಲಯಕ್ಕೆ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದ್ದು,
ಅದರಲ್ಲಿ ಮಲ್ಯರ ವಂಚನೆಯನ್ನು ವಿವರಿಸಿದೆ.

ಕಿಂಗ್‌ಫಿಶರ್‌ಗೆಂದು ಪಡೆದ ಹಣದ ಪೈಕಿ 3700 ಕೋಟಿ ರು. ಹಣವನ್ನು ತಮ್ಮದೇ ಒಡೆತನದ ಫಾರ್ಮುಲಾ ಒನ್ ರೇಸ್ ಕಂಪನಿಗೆ, ಟಿ-20 ಐಪಿಎಲ್ ತಂಡ ಖರೀದಿಗೆ ಹಾಗೂ ಖಾಸಗಿ ವಿಮಾನದಲ್ಲಿ ಸುತ್ತಾಡಲು ಬಳಸಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಇ.ಡಿ ದಾಖಲಿಸಿದೆ. ಅಲ್ಲದೆ ನೂತನ ಕಾಯ್ದೆಯ ಅಡಿಯಲ್ಲಿ ಮಲ್ಯ ದೇಶಭ್ರಷ್ಟ ಎಂದು ಘೋಷಿಸಿದೆ.

ಅಲ್ಲದೆ, ಮಲ್ಯಗೆ ಸಂಬಂಧಿಸಿದ ಎರಡು  ಕಂಪನಿಗಳಾದ ಕಿಂಗ್‌ಫಿಶರ್ ಮತ್ತು ಯುಬಿಎಚ್‌ಎಲ್ ಹಾಗೂ ಇತರರ ವಿರುದ್ಧವೂ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

loader