ವಿಜಯ್ ಮಲ್ಯಗೆ ಹೊಸ ಪಟ್ಟ

First Published 23, Jun 2018, 9:12 AM IST
Vijay Mallya: India seeks fugitive tag for Mallya
Highlights

ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪರಾರಿಯಾಗಿರುವ ಅಪರಾಧಿ ಎಂದು ಘೋಷಿಸಬೇಕು ಮತ್ತು ಅವರ 12500 ಕೋಟಿ ರು.ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 

ನವದೆಹಲಿ/ ಮುಂಬೈ: ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪರಾರಿಯಾಗಿರುವ ಅಪರಾಧಿ ಎಂದು ಘೋಷಿಸಬೇಕು ಮತ್ತು ಅವರ 12500 ಕೋಟಿ ರು.ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 

ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾದವರನ್ನು ಮಟ್ಟಹಾಕಲೆಂದೇ ಕೇಂದ್ರ ಸರ್ಕಾರ ಇತ್ತೀಚೆಗೆ ನೂತನ ಕಾಯ್ದೆಯೊಂದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು. 

ಇದೇ ಕಾಯ್ದೆ ಅನ್ವಯ ಮಲ್ಯರ ಆಸ್ತಿ ಜಪ್ತಿಗೆ ಇಡಿ ಮನವಿ ಮಾಡಿಕೊಂಡಿದೆ. ಈ ಅರ್ಜಿಯಲ್ಲಿ ಮಲ್ಯ ನೇರವಾಗಿ ಹೊಂದಿರುವ ಮತ್ತು ಪರೋಕ್ಷವಾಗಿ ಹೊಂದಿರುವ ವಿವಿಧ ಆಸ್ತಿಗಳ ಜಪ್ತಿಗೆ ಮನವಿ ಮಾಡಿಕೊಳ್ಳಲಾಗಿದೆ.

loader