ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಕೋಟಿ ಕೋಟಿ ವಂಚಿಸಿ ಲಂಡನ್ ನಲ್ಲಿ ಟಿಕಾಣಿ ಹೂಡಿರುವ ವಿಜಯ್​ ಮಲ್ಯ ಸದ್ಯಕ್ಕೆ ರಿಲೀಫ್​ ಆಗೋ ಲಕ್ಷಣ ಕಾಣುತ್ತಿಲ್ಲ. ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತು ಇವತ್ತು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌'ನಲ್ಲಿ ವಿಚಾರಣೆ ನಡೆದಿದೆ.  ಆದರೆ  ಕೋರ್ಟ್ ಹಾಲ್'ನಲ್ಲಿ ಅಗ್ನಿ ಅವಘಡದ ಅಲಾರಾಂ ಬಾರಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ನವದೆಹಲಿ (ಡಿ.04): ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಕೋಟಿ ಕೋಟಿ ವಂಚಿಸಿ ಲಂಡನ್ ನಲ್ಲಿ ಟಿಕಾಣಿ ಹೂಡಿರುವ ವಿಜಯ್​ ಮಲ್ಯ ಸದ್ಯಕ್ಕೆ ರಿಲೀಫ್​ ಆಗೋ ಲಕ್ಷಣ ಕಾಣುತ್ತಿಲ್ಲ. ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತು ಇವತ್ತು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌'ನಲ್ಲಿ ವಿಚಾರಣೆ ನಡೆದಿದೆ. ಆದರೆ ಕೋರ್ಟ್ ಹಾಲ್'ನಲ್ಲಿ ಅಗ್ನಿ ಅವಘಡದ ಅಲಾರಾಂ ಬಾರಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿಸೆಂಬರ್ 14ರ ವರೆಗೆ ವಿಚಾರಣೆ ನಡೆಯಲಿದ್ದು, ಬಳಿಕ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಲಿದೆ. ಇವೆಲ್ಲದರ ಮಧ್ಯೆ ಪ್ರತಿಕ್ರಿಯಿಸಿರುವ ಮಲ್ಯ, ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಪುನರುಚ್ಚರಿಸಿದ್ದಾರೆ. 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶದಿಂದ ಪಲಾಯನ ಮಾಡಿರುವ ಮದ್ಯದ ದೊರೆಯನ್ನು ಭಾರತಕ್ಕೆ ಕರೆತರುವ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ವೆಸ್ಟ್‌ಮಿನಿಸ್ಟರ್‌ ಕೋರ್ಟ್​ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.