ಭಾರತದ ಬ್ಯಾಂಕ್'ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್'ನಲ್ಲಿ ನೆಲೆಸಿರುವ ಮದ್ಯ ದೊರೆ ವಿಜಯ್ ಮಲ್ಯ ಇಂದು ಲಂಡನ್ ನ ವೆಸ್ಟ್ ಮಿನಿಸ್ಟರಿ ಮ್ಯಾಜಿಸ್ಟ್ರೇಟ್  ಕೋರ್ಟ್ ಗೆ ಹಾಜರಾದರು.

ನವದೆಹಲಿ (ಜೂ.13): ಭಾರತದ ಬ್ಯಾಂಕ್'ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್'ನಲ್ಲಿ ನೆಲೆಸಿರುವ ಮದ್ಯ ದೊರೆ ವಿಜಯ್ ಮಲ್ಯ ಇಂದು ಲಂಡನ್ ನ ವೆಸ್ಟ್ ಮಿನಿಸ್ಟರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾದರು.

ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಅಲ್ಲಿನ ಕೋರ್ಟ್ ನಡೆಸುತ್ತಿರುವ ವಿಚಾರಣೆಗೆ ಇಂದು ಹಾಜರಾದರು. ಇದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಾನು ಯಾವುದೇ ರೀತಿಯ ವಂಚನೆ ಮಾಡಿಲ್ಲ. ಅಲ್ಲದೆ ತಾನು ತಪ್ಪಿತಸ್ಥ ಅಲ್ಲ ಎಂದು ಸಾಬಿತುಪಡಿಸಲು ಸಾಕಷ್ಟು ದಾಖಲೆಗಳು ನನ್ನ ಬಳಿಯಿವೆ ಎಂದು ಹೇಳಿದ್ದಾರೆ.

ಮಲ್ಯರಿಗೆ ಡಿ.04 ರವರೆಗೆ ಲಂಡನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನನ್ನು ವಿಸ್ತರಿಸಿದೆ. ಮುಂದಿನ ವಿಚಾರಣೆ ಜುಲೈ 6 ರಂದು ನಡೆಯಲಿದೆ.