ಮಲ್ಯ ಹಾಜರಾದ ಮೇಲಷ್ಟೇ ತೀರ್ಪು: ಈ ನಡುವೆ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಮಲ್ಯಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಸ್ಥಗಿತಗೊಳಿಸಿದೆ.
ನವದೆಹಲಿ(ಜು.15): ವಂಚನೆ ಕೇಸಲ್ಲಿ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಅವರನ್ನು ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಅತ್ಯಧಿಕ ಬಿಗಿ ಭದ್ರತೆಯ 12ನೇ ಬಾರಕ್‌ನಲ್ಲಿ ಉದ್ಯಮಿಯನ್ನು ಬಂಧಿಸಿಡುವುದಾಗಿ ಬ್ರಿಟನ್ ಸರ್ಕಾರಕ್ಕೆ ಮಾಹಿತಿ ನೀಡಿದೆ. ಯಾವುದೇ ವ್ಯಕ್ತಿಯನ್ನು ಬೇರೆ ದೇಶಕ್ಕೆ ಗಡೀಪಾರು ಮಾಡುವ ಮುನ್ನ ಆ ದೇಶದಲ್ಲಿನ ಜೈಲಿನ ಸ್ಥಿತಿಗಳ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ಬ್ರಿಟನ್ ತೆಗೆದುಕೊಳ್ಳುತ್ತದೆ. ಅದರಂತೆ, ಮಲ್ಯ ಅವರ ಬಗ್ಗೆ ಬ್ರಿಟನ್ ಸರ್ಕಾರ ಕೇಳಿದ ಪ್ರಶ್ನೆಗೆ ಭಾರತ ಸರ್ಕಾರ ಮೇಲ್ಕಂಡ ಉತ್ತರ ನೀಡಿದೆ.
ಮಲ್ಯ ಹಾಜರಾದ ಮೇಲಷ್ಟೇ ತೀರ್ಪು: ಈ ನಡುವೆ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಮಲ್ಯಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಸ್ಥಗಿತಗೊಳಿಸಿದೆ. ಮಲ್ಯ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಆಗದು. ಮಲ್ಯ ಖುದ್ದು ಹಾಜರಾದ ಮೇಲಷ್ಟೇ ಈ ಕೇಸಲ್ಲಿ ಮುಂದುವರೆಯಬಹುದು ಎಂದು ನ್ಯಾಯಪೀಠ ಹೇಳಿದೆ
