Asianet Suvarna News Asianet Suvarna News

ರವಿ ಬೆಳಗೆರೆ ಜೈಲುಶಿಕ್ಷೆ ಕೈಬಿಡಲು ವಿಧಾನಸಭೆ ನಕಾರ

ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಮೇರೆಗೆ ಪತ್ರಕರ್ತರಾದ ರವಿ ಬೆಳೆಗೆರೆ ಮತ್ತು ಅನಿಲ್‌ರಾಜ್ ವಿರುದ್ಧ ಸದನ ಕೈಗೊಂಡ ಹಕ್ಕುಚ್ಯುತಿ ನಿರ್ಣಯ ಮರು ಪರಿಶೀಲನೆ ಮಾಡಬೇಕು ಎಂಬ ಪತ್ರಕರ್ತರ ಪರ ವಕೀಲರ ಪ್ರಸ್ತಾಪವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿರಸ್ಕರಿಸಿದ್ದಾರೆ. ಮಂಗಳವಾರ ಮರು ಪರಿಶೀಲನಾ ಪ್ರಸ್ತಾಪವನ್ನು ಸದನ ಕೈಬಿಡುವ ಮೂಲಕ ಪತ್ರಕರ್ತರಿಗೆ ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡದ ತೀರ್ಪು ಜೀವಂತವಾಗಿ ಉಳಿದುಕೊಂಡಂತಾಯಿತು.

Vidhana Sabha denied to Cancell Jail term to Ravi Belagere

ಬೆಂಗಳೂರು (ನ.22): ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಮೇರೆಗೆ ಪತ್ರಕರ್ತರಾದ ರವಿ ಬೆಳೆಗೆರೆ ಮತ್ತು ಅನಿಲ್‌ರಾಜ್ ವಿರುದ್ಧ ಸದನ ಕೈಗೊಂಡ ಹಕ್ಕುಚ್ಯುತಿ ನಿರ್ಣಯ ಮರು ಪರಿಶೀಲನೆ ಮಾಡಬೇಕು ಎಂಬ ಪತ್ರಕರ್ತರ ಪರ ವಕೀಲರ ಪ್ರಸ್ತಾಪವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿರಸ್ಕರಿಸಿದ್ದಾರೆ. ಮಂಗಳವಾರ ಮರು ಪರಿಶೀಲನಾ ಪ್ರಸ್ತಾಪವನ್ನು ಸದನ ಕೈಬಿಡುವ ಮೂಲಕ ಪತ್ರಕರ್ತರಿಗೆ ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡದ ತೀರ್ಪು ಜೀವಂತವಾಗಿ ಉಳಿದುಕೊಂಡಂತಾಯಿತು.

‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಸಂಪಾದಕ ಅನಿಲ್‌ರಾಜ್ ಅವರು ಸದನದ ಶಿಕ್ಷೆಯನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸಭಾಧ್ಯಕ್ಷರು ಚರ್ಚೆಗೆ ಸದನದ ಮುಂದಿ ಟ್ಟರು. ಈ ವೇಳೆ ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಮೇರೆಗೆ ಸದನ ಕೈಗೊಂಡಿದ್ದ ತೀರ್ಮಾನಕ್ಕೆ ಬದ್ಧವಾಗಿರಬೇಕು ಎಂದು ಸದನದ ಸದಸ್ಯರು ಆಗ್ರಹಿಸಿದರು. ಪೊಲೀಸರಿಗೆ ಶಿಫಾರಸು: ಪತ್ರಕರ್ತರಾದ ರವಿ ಬೆಳೆಗೆರೆ ಮತ್ತು ಅನಿಲ್‌ರಾಜ್ ವಿರುದ್ಧ ಸದನ ಕೈಗೊಂಡ ಹಕ್ಕುಚ್ಯುತಿ ನಿರ್ಣಯ ಮರು ಪರಿಶೀಲನೆ ಪ್ರಸ್ತಾಪವನೆ ತಿರಸ್ಕಾರಗೊಂಡಿರುವ ಬೆನ್ನಲ್ಲೇ ವಿಧಾನಸಭೆಯ ಸಚಿವಾಲಯದಿಂದ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಆಯುಕ್ತರು ಹಾಗೂ ಕಾರಾಗೃಹದ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

Follow Us:
Download App:
  • android
  • ios