Asianet Suvarna News Asianet Suvarna News

ರಾಜಸ್ಥಾನದಲ್ಲಿ ನಡೆಯಿತು ಭೀಕರ ಅಮಾನವೀಯ ಘಟನೆ: ಲೈವ್'ನಲ್ಲೇ ಕೊಲೆ ಮಾಡಿ ಸುಟ್ಟ ಕಿರಾತಕ

ದುಷ್ಟ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿರುವುದರ ಜೊತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದರ  ಜೊತೆಗೆ ಲವ್​ ಜಿಹಾದ್​ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆ ಕೂಡ ನೀಡಿದ್ದಾನೆ.

Videos show attacker axing and burning man in Rajasthan
  • Facebook
  • Twitter
  • Whatsapp

ಜೈಪುರ(ಡಿ.07): ರಾಜಸ್ಥಾನದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸುವ ಅಮಾನವೀಯ ಕೃತ್ಯ ನಡೆದಿದೆ. ಲವ್​ ಜಿಹಾದ್​ ಹೆಸರಿನಲ್ಲಿ ದುಷ್ಕರ್ಮಿಯೊಬ್ಬ ಮಧ್ಯವಯಸ್ಕ ಯುವಕನೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಆ ವ್ಯಕ್ತಿಯನ್ನು ಅಲ್ಲೇ ಸುಟ್ಟು ಅಟ್ಟಹಾಸ ಮೆರದಿದ್ದಾನೆ.

ಈ ದುಷ್ಟ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿರುವುದರ ಜೊತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದರ  ಜೊತೆಗೆ ಲವ್​ ಜಿಹಾದ್​ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆ ಕೂಡ ನೀಡಿದ್ದಾನೆ. ರಾಜಸ್ಥಾನ ರಾಜ್ಸಮಂದ್​ನಲ್ಲಿ  ಘಟನೆ ನಡೆದಿದೆ. ಮಹಮ್ಮದ್​ ಭಟ್ಟ್​ ಶೇಕ್ ಎಂಬಾತನೇ ಕೊಲೆಯಾದ ದುರ್ದೈವಿ. ಹಂತಕ ಶಂಬುನಾಥ್​ ರಾಯ್​ಗರ್​​ಪೊಲೀಸರ ವಶಕ್ಕೆ ಪಡೆದಿದ್ದು, ರಾಜ್ಯ ಸರ್ಕಾರ ಪ್ರಕರಣವನ್ನು ಎಸ್'ಐಟಿಗೆ ವಹಿಸಿದೆ.

Follow Us:
Download App:
  • android
  • ios